ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋದರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮೀಕೊಳ್ಳಲಾಗಿತ್ತು.

ದೇಶಕ್ಕಾಗಿ ತಮ್ಮ ಮನೆ ಮಠ ಸಂಸಾರಗಳನ್ನು ತ್ಯಜಿಸಿ ದೇಶಗೊಸ್ಕರ ಚಳಿ ಗಾಳಿ ಮಳೆಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣವಾಗಿಟ್ಟು ಹಗಲು ರಾತ್ರಿ ದೇಶವನ್ನು ಕಾಯುವ ಯೋಧರ ಸೇವೆ ಎಂದ ಅಜರಾಮರ ಎಂದು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç ರವರು ನುಡಿದರು. ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರ ಸೇವೆ, ತ್ಯಾಗ,ಬಲಿದಾನ ಇವುಗಳ ಯಶೋಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸಲೆಬೇಕಾದ ಅಗತ್ಯವಿದೆ. ಕಾರ್ಗಿಲ್ ಯುದ್ದ ಪ್ರದೇಶದಲ್ಲಿ ಹೋರಾಡಿ ವಿಜಯ ಸಾಧಿಸಿದ ಎಲ್ಲಾ ಹುತಾತ್ಮರಿಗೆ ಹೊವು ಹಾಗೂ ಮೆಣದ ಬತ್ತಿಯನ್ನು ಹಚ್ಚಿ ಗೌರವ ಸಮರ್ಪಣೆಮಾಡಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ್ ರವರು ಸಹ ಮಾತನಾಡಿದರು. ಕಾರ್ಗಿಲ್ ಯುದ್ದದ ಬಗ್ಗೆ ಎಡಿಸಿ ಶ್ರೀ ಶ್ರೀನಿವಾಸ್ ವರ್ಮ ರವರು ಸಂಕ್ಷಿಪ್ತವಾಗಿ ವಿಡಿಯೊ ಕ್ಲಿಪ್ ತೋರಿಸುವುದರ ಮೂಲಕ ವಿವಿರಣೆ ನೀಡಿದರು.ಸ್ವಾಗತವನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ ರವರು ನಿರ್ವಹಿಸಿದರೆ ವಂದನಾರ್ಪಣೆಯನ್ನು ಎಸ್.ಜಿ.ವಿ ಕುಮಾರಿ ಸುಮಲತಾ ಕೆ. ರವರು ನಿರ್ವಹಿಸಿದರು. ಎಲ್.ಎ ಸಹಾಯಕ ಕಾರ್ಯದರ್ಶಿ ಶ್ರೀ ರಾಜೇಶ ಅವಲಕ್ಕಿರವರು ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಸಂಪರ್ಕಾಧಿಕಾರಿ ಶ್ರೀ ವಿಜಯಕುಮಾರ, ಎಲ್.ಎ ಕಾರ್ಯದರ್ಶಿ ಶ್ರೀ ಡಿ.ಎನ್.ನೂರ ಅಹಮದ್, ಎಲ್.ಎ ಖಜಾಂಚಿ ಶ್ರೀ ದೀಪು, ಡಿವಿಎಸ್. ರೇಂಜರ್ ಲೀಡರ್ ಕುಮಾರಿ ಅನುಷಾ,ಕಬ್, ಬುಲ್‌ಬುಲ್, ಸ್ಕೌಟ್ಸ್, ಗೈಡ್ಸ್, ರೋರ‍್ಸ್, ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153