ನಮ್ಮ ಯುವ ಸಮೂಹದಲ್ಲಿ ಆವಿಷ್ಕಾರ ಚಿಂತನೆಗಳನ್ನು ಸದೃಢಗೊಳಿಸಲು ಹ್ಯಾಕಥಾನ್ ಕಾರ್ಯಕ್ರಮಗಳು ಪೂರಕ ವೇದಿಕೆಯಾಗಿ ನಿಲ್ಲಲಿದೆ ಎಂದು ಎನ್ ಐಟಿಕೆ ಸುರತ್ಕಲ್ ಸಹ ಪ್ರಾಧ್ಯಾಪಕರಾದ ಡಾ ಡಿ ಪುಷ್ಪರಾಜ್ ಶೆಟ್ಟಿ ಅಭಿಪ್ರಾಯಪಟ್ಟರು ನಗರದ ಜೆಎನ್ ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್&ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ ಜೆ ಎನ್ ಎನ್ ಸಿ ಇ, ಐ ಇ ಇ ಇ, ಐ ಇ ಟಿ ಇ , ಶಿವಮೊಗ್ಗ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಪ್ಲಾಸ್ಮಾ -2021’ 2 ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ರ್ಧಾತ್ಮಕ ಯುಗದಲ್ಲಿ ಪ್ರತಿದಿನವೂ ಹೊಸ ತಂತ್ರದ ಬಳಕೆಗೆ ಲಭ್ಯವಾಗುತ್ತಿದೆ .ನಮ್ಮಲ್ಲಿ ಮೂಡುವ ಹೊಸ ಆಲೋಚನೆ ಸ್ಪರ್ಧಾತ್ಮಕ ಯುಗದ ವೇಗಕ್ಕೆ ತಕ್ಕಂತೆ ಬದಲಾಯಿಸಲು ಅವಶ್ಯಕ .ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಡಾಟಾ ಸೈನ್ಸ್ ಇಂತಹ ವಿಶೇಷ ವಿಷಯಗಳ ಕಲಿಕೆಗೆ ಆಗುತ್ತಿರುವುದು ಹೊಸ ತನ್ನತ್ತ ಆಲೋಚನೆ ನಡೆಸಲು ಪ್ರೇರಣೆಯಾಗಿದೆ. ನೋವು ಲಭ್ಯವಾಗಿರುವ ಸಮಯದಲ್ಲಿಯೇ ಹೊಸತನದ ಆವಿಷ್ಕಾರ ನಡೆಸಬೇಕಾಗಿದೆ .ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಆವಿಷ್ಕಾರಿ ಕೊಡುಗೆಗಳನ್ನು ನೀಡಲು ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು.ಮಣಿಪಾಲ ವಿಶ್ವವಿದ್ಯಾಲಯದಎಲೆಕ್ಟ್ರಾನಿಕ್ಸ್&ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ ನಿರಂಜನ್ ಯು ಸಿ ಮಾತನಾಡಿ ನಮ್ಮ ದೈನಂದಿನ ಬದುಕಿನಲ್ಲಿ ತಂತ್ರಜ್ಞಾನವೆಂಬುದು ಸಂಪೂರ್ಣ ಆವರಿಸಿಕೊಂಡಿದೆ ಹಳೆಯ ತಲೆಮಾರಿನಲ್ಲಿ ಬದುಕಿನ ಹೆಜ್ಜೆಗಳು ಕಷ್ಟಕರವಾಗಿತ್ತು ಆದರೆ ಇಂದು ಕಾಲ ಬದಲಾಗಿದೆ. ಆವಿಷ್ಕಾರದ ಸಾಕ್ಷರತೆಯ ಮೂಲಕ ಬದುಕು ಸುಗಮವಾಗಿದೆ.ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ಅವಲಂಬನೆ ಹೆಚ್ಚಾಗಿದೆ ಬಳಕೆದಾರರಿಗೆ ಹೆಚ್ಚು ಸೌಲಭ್ಯ ನೀಡಲು ಸೇವೆ ನೀಡುವ ಕಂಪೆನಿಗಳ ನಡುವೆ ಸ್ಪರ್ಧೆ ಒಡಮೂಡಿದೆ ಇಂತಹ ಆರೋಗ್ಯಕರ ಸ್ಪರ್ಧೆ ಹೊಸ ಅವಿಷ್ಕಾರಗಳು ಅನುಷ್ಠಾನ ಗಳಲ್ಲಿ ಸಾಧ್ಯವಾಗುತ್ತಿದೆ ಯುವ ಸಮುದಾಯದಲ್ಲಿನ ನಾವಿನ್ಯ ಚಿಂತನೆಗಳಿಂದ ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿಯಾಗಲಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಜೆಎನ್ ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್&ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಎಸ್ ವಿ ಸತ್ಯನಾರಾಯಣ ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಪೂರ್ಣಿಮಾ ಕೆಎಂ ಸಂಯೋಜಕರಾದ, ಡಿ ಈ ಶ್ವೇತಾ ಎಚ್ ಆರ್ ಶರತ್, ಎಸ್ ಡಾ ಸಂಖ್ಯಾ ನಾಯಕ್, ನಂದೀಶ್ ಸೇರಿದಂತೆ ಭಾಗವಹಿಸಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153