ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ವಿನಾಯಕ ನಗರದಲ್ಲಿ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ. ಎಸ್ ಅರುಣ್ ಅವರು ಬೂತ್ ನಂಬರ್ 71 ರಲ್ಲಿ ಬೂತ್ ಅಧ್ಯಕ್ಷರಾದ ವೆಂಕಟೇಶ್ ಅವರ ಮನೆ ಮೇಲೆ ಪಕ್ಷದ ಧ್ವಜ ಅನಾವರಣ ಮಾಡುವುದರ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.

ಸಂಸ್ಥಾಪನ ದಿನಾಚರಣೆ ಅಂಗವಾಗಿ ಇಡೀ ದೇಶದ ಎಲ್ಲ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜರೋಹಣ ನೆರವೇರಿಸಿ, ಬೂತ್ ಕಾರ್ಯಕರ್ತರೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಭಾರತೀಯ ಜನತಾ ಪಕ್ಷದ ನಡೆದು ಬಂದ ದಾರಿಯ ಕುರಿತು ತಿಳಿಸಿದರು. 1951 ರಲ್ಲಿ ಭಾರತೀಯ ಜನತಾ ಸಂಘ ಪ್ರಾರಂಭವಾಯಿತು. 1977ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮಾರ್ಪಾಡಾಯಿತು.1980 ಏಪ್ರಿಲ್ 6 ರಂದು ಭಾರತೀಯ ಜನತಾ ಪಕ್ಷವಾಗಿ ಉದಯವಾಯಿತು. ಪಕ್ಷದ ಸಾಧನೆ ಕುರಿತು ತಿಳಿಸಿದರು.

ವಾರ್ಡ್ ಅಧ್ಯಕ್ಷರಾದ ದೂಪ ಗಣೇಶ್, ಸೂಡ ಮಾಜಿ ಅಧ್ಯಕ್ಷರಾದ ಎನ್.ಜೆ.ನಾಗರಾಜ್, ನಗರಸಭಾ ಮಾಜಿ ಅಧ್ಯಕ್ಷರಾದ ಎಂ ಶಂಕರ್, ವಾರ್ಡ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಸತೀಶ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಿನೇಶ್, ಸಂಜಯ್, ಶಕ್ತಿ ಕೇಂದ್ರದ ಅಧ್ಯಕ್ಷ ಮುರುಗನ್ ಹಾಗೂ ರಾಜೇಶ್ ಕಾಮತ್, ಚಂದ್ರಶೇಖರ್ ಹಾಗೂ ಬೂತ್ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ