ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಏಪ್ರಿಲ್ 28ರಂದು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ
ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿನೋದ್ ತಿಳಿಸಿದ್ದಾರೆ.


ನೋಬಲ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ದೇಶದಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಇದು ಕೇಂದ್ರ ಸರಕಾರದ Ministry of broadcasting ನಿಂದ ಮಾನ್ಯತೆ ಪಡೆದಿರುತ್ತದೆ.
ಹಾಗೂ ISBN (International Standard Book Number) ನಲ್ಲಿ ನೊಂದಣಿ ಆಗಿರುತ್ತದೆ.
ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಉತ್ತರ ಪ್ರದೇಶದ lucknow ನಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಮುದ್ರಣ ಕಛೇರಿಯನ್ನು ತಮಿಳುನಾಡಿನ coimbatore ನಲ್ಲಿ
ಹೊಂದಿದ್ದು ವಿಶೇಷ ಸಾಧನೆ ತೋರುವ ಹಾಗೂ ವೈಶಿಷ್ಟತೆ ಇರುವ ವ್ಯಕ್ತಿಗಳನ್ನು ಪ್ರಶಂಸಿಸಿ ಪಬ್ಲಿಕೇಶನ್ ಮಾಡುವುದು.


ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಜನರು ಹಾಗೂ ವೈಶಿಷ್ಟತೆಯನ್ನು ಹೊಂದಿರುವ ವ್ಯಕ್ತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಇದರಲ್ಲಿ ಭಾಗವಹಿಸಲು ಇಚ್ಚಿಸುವವರು ಏಪ್ರಿಲ್ 20ರ ಒಳಗೆ
ದೂರವಾಣಿ ಮುಖಾಂತರ 9900933653 ಆಯೋಜಕರನ್ನು ಸಂಪರ್ಕಿಸಬಹುದಾಗಿದೆ.
ಮತ್ತು ಏಪ್ರಿಲ್ 28ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹೆಸರಾಂತ ಚೆಸ್ ಪಟು ಏಷಿಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಮಾಡಲಿದ್ದು
ಕಾರ್ಯಕ್ರಮಕ್ಕೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಕರ್ನಾಟಕ ರಾಜ್ಯ ನಿರ್ದೇಶಕರು ಡಾ ll ಎಸ್ ಕೃಷ್ಣ ಮೂರ್ತಿ ಯವರು ಆಗಮಿಸುತ್ತಿದ್ದಾರೆ.


ಮುಖ್ಯವಾಗಿ ಈ ಒಂದು ರೆಕಾರ್ಡ್ ಅಟೆಂಪ್ಸ್ ನೋಡಲು ಬಹಳ ಕುತೂಹಲಕರವಾಗಿ ಆಕರ್ಷಕರವಾಗಿ ಇರುವುದರಿಂದ ಶಿವಮೊಗ್ಗ ನಗರದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬಂದು ಇದನ್ನು ನೋಡಲು ಕೋರಿದ್ದಾರೆ.

ವರದಿ ಪ್ರಜಾ ಶಕ್ತಿ