ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿರುವ ಕೋವಿಡ ಕೇರ್ ಸೆಂಟರ್ ಅನ್ನು ಶ್ರೀ ಬಸವ ಮರುಳಾರಾಧ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ , ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ ಹಾಗೂ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷರಾದ ದತ್ತಾತ್ರಿ ಉಪಸ್ಥಿತರಿದ್ದರು. ಶಿವಮೊಗ್ಗದ ಸೇವಾಭಾರತಿ ವತಿಯಿಂದ ಸ್ಥಾಪಿಸಲಾಗಿರುವ ಈ ಕೋವಿಡ ಕೇರ್ ಸೆಂಟರ್ ನಲ್ಲಿ ನೂರು ಬೆಡ್ ಗಳಿದ್ದು . ಮೇಲಿನ ಐವತ್ತು ಭೇಟಿಗಳು ಸಾಮಾನ್ಯ ಹಾಗೂ ಕೆಳ ಮಹಡಿಯ ಐವತ್ತು ಬೆಡ್ ಗಳು ವಿತ್ ಆಕ್ಸಿಜನ್. ಇಲ್ಲಿ ಮೆಟ್ರೋ ಆಸ್ಪತ್ರೆಯ ನುರಿತ ವೈದ್ಯರು ಹಾಗೂ ಸಿಬ್ಬಂದಿಗಳು 3ಶಿಫ್ಟ್ ನಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಈ ಸೆಂಟರ್ ನಲ್ಲಿ ದಾಖಲಾಗಲು ಮೆಗ್ಗಾನ್ ಅಥವಾ ಯಾವುದೇ ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಕಡ್ಡಾಯ. ಇಲ್ಲಿರುವ ರೋಗಿಗಳಿಗೆ ಮನಸ್ಥೈರ್ಯ ತುಂಬಲು ಪುಸ್ತಕಗಳ ವ್ಯವಸ್ಥೆ ಮಾಡಲಾಗಿದೆ . ದಿನವೂ ದಿನಪತ್ರಿಕೆಗಳು ಇರುತ್ತವೆ. ಯೋಗ ಹಾಗೂ ಭಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು. ನಾಳೆಯಿಂದ ಕಾರ್ಯಾರಂಭ ಮಾಡಲಿದೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ