ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ, ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆರವರ ಮಾರ್ಗಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗರವರ ನೇತೃತ್ವದಲ್ಲಿ, ಆರ್.ಪಿ.ಎಸ್.ಎಫ್ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಾಗರ ಟೌನ್ ನಲ್ಲಿ ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಂಡಿದ್ದು, ಸದರಿ ಪಥಸಂಚನವನ್ನು ಸಾಗರ ಟೌನ್ ಪೊಲೀಸ್ ಠಾಣೆಯಿಂದ ಪ್ರಾರಂಭಿಸಿ ಸಾಗರ ವೃತ್ತ, ಮಾರಿಕಾಂಬ ದೇವಸ್ಥಾನ ರಸ್ತೆ, ಗಣಪತಿ ದೇವಸ್ಥಾನ, ಲಿಂಬು ವೃತ್ತ, ತಿಲಕ್ ರಸ್ತೆ, ಅಶೋಕ ರಸ್ತೆ, ಚರ್ಚ್ ರಸ್ತೆಯಿಂದ ಪುನಾಃ ಸಾಗರ ಟೌನ್ ಪೊಲೀಸ್ ಠಾಣೆಗೆ ಬಂದು ಮುಕ್ತಾಯ ಮಾಡಲಾಯಿತು.

ಸದರಿ ಪಥ ಸಂಚನದಲ್ಲಿ ಶ್ರೀ ಮಹಾಬಲೇಶ್ವರ ನಾಯ್ಕ, ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಶ್ರೀ ಸೀತಾರಾಂ, ಪಿಐ, ಸಾಗರ ಟೌನ್ ಪೊಲೀಸ್ ಠಾಣೆ, ಶ್ರೀ ಆಂಜನಪ್ಪ, ಪೊಲೀಸ್ ನಿರೀಕ್ಷಕರು,ಆರ್.ಪಿ.ಎಸ್.ಎಫ್ ಮೀಸಲು ಪಡೆ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು, ಆರ್.ಪಿ.ಎಸ್.ಎಫ್ ಮೀಸಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಭದ್ರಾವತಿ…

ಭದ್ರಾವತಿ ಉಪ ವಿಭಾಗರವರ ನೇತೃತ್ವದಲ್ಲಿ, ಐ.ಟಿ.ಬಿ.ಪಿ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಭದ್ರಾವತಿ ಟೌನ್ ನಲ್ಲಿ ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಂಡಿದ್ದು, ಸದರಿ ಪಥಸಂಚನವನ್ನು ಗಾಂಧಿ ವೃತ್ತದಿಂದ ಪ್ರಾರಂಭಿಸಿ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಸಂತೆ ಮೈದಾನ, ಹೊಸಮನೆ ಮುಖ್ಯ ರಸ್ತೆಯಿಂದ ಗಾಂದಿ ವೃತ್ತಕ್ಕೆಬಂದು ಮುಕ್ತಾಯ ಮಾಡಲಾಯಿತು.

ಸದರಿ ಪಥ ಸಂಚನದಲ್ಲಿ ಶ್ರೀ ಶೀಶೈಲ, ಪೊಲೀಸ್ ವೃತ್ತ ನಿರೀಕ್ಷಕರು,ಭದ್ರಾವತಿ ನಗರ ವೃತ್ತ ಮತ್ತು ಶ್ರೀ ರಾಜೀವ್ ಅಸಿಸ್ಟೆಂಟ್ ಕಮಾಂಡೆಂಟ್, ಐಟಿಬಿಪಿ ಮೀಸಲು ಪಡೆ, ಭದ್ರಾವತಿ ನಗರ ವೃತ್ತದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು, ಐಟಿಬಿಪಿ ಮೀಸಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ