ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ನೆಹರು ಕ್ರೀಡಾಂಗಣ ಹಾಗೂ ಗಾಂಧಿ ಪಾರ್ಕ್ ನಲ್ಲಿ ನಡೆದ ನೋಬೆಲ್ ವರ್ಲ್ಡ್ ರೆಕಾರ್ಡ್ ಅಟೆಂಪ್ಟ್ ನಲ್ಲಿ ಜಿಲ್ಲೆಯ ಅನೇಕ ಕೌಶಲ್ಯ ಭರಿತ ವಿದ್ಯಾರ್ಥಿಗಳು ಹಾಗೂ ಕಲಾತಂಡಗಳು ವೈಶಿಷ್ಟ ರೀತಿಯಲ್ಲಿ ರೆಕಾರ್ಡ್ ಮಾಡುವ ಮುಖಾಂತರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಭದ್ರಾವತಿಯ ಹರೀಶ್ ಮತ್ತು ಸ್ವಾತಿ ದಂಪತಿಗಳ ಪುತ್ರಿ ಹಾಗೂ ಬಿಜಿಎಸ್ ಶಾಲೆ ಕಾರೆಹಳ್ಳಿಯ ವಿದ್ಯಾರ್ಥಿನಿ 5 ವರ್ಷದ ಶನ್ವಿತಾ ಗೌಡ ಹೆಚ್ 9 ನಿಮಿಷ 56 ಸೆಕೆಂಡ್ ನಲ್ಲಿ ಮುಖ್ಯಮಂತ್ರಿಗಳ ಹೆಸರು ಪ್ರಧಾನಿಗಳ ಹೆಸರು ರಾಷ್ಟ್ರಪತಿಗಳ ಹೆಸರು ರಾಜ್ಯಗಳ ಹೆಸರು ಸೇರಿದಂತೆ 159 ಸ್ಪರ್ಧಾತ್ಮಕ ಪ್ರಶ್ನೆಗಳಿಗೆ ಉತ್ತರಿಸಿ ದಾಖಲೆ ಮಾಡಿದ್ದಾರೆ.

ಸಾಗರದ ಆನಂದ ಮತ್ತು ಜ್ಯೋತಿ ದಂಪತಿಗಳ ಪುತ್ರಿ ಹಾಗೂ ಪಂಚಪ್ಪ ನೇತೃತ್ವದ ಸಾಗರ ಕರಾಟೆ ಇನ್ಸ್ಟಿಟ್ಯೂಟ್ ವಿದ್ಯಾರ್ಥಿನಿ ಕೀರ್ತನ ಎ
15 ನಿಮಿಷದಲ್ಲಿ 1573 ಸೈಡ್ ಸಿಟಪ್ಸ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಶಿವಮೊಗ್ಗದ ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ನ ತರಬೇತಿದಾರ ಶರವಣ ರವರ ವಿದ್ಯಾರ್ಥಿನಿ
ಹಾಗೂ ವಿಜಯ್ ಕುಮಾರ್ ಚಂದ್ರಿಕಾ ದಂಪತಿಗಳ ಪುತ್ರಿ
ಕುಮಾರಿ ಸಿಂಧೂರಿ
43 ನಿಮಿಷ 10 ಸೆಕೆಂಡನಲ್ಲಿ
1735 ಸಿಟ್ ಅಪ್ಸ್ ಮಾಡಿ ದಾಖಲೆ ಮಾಡಿದ್ದಾರೆ.

ಗುಂಪು ವಿಭಾಗದಲ್ಲಿ
ಶಿವಮೊಗ್ಗದ ಸ್ಟೈಲ್ ಡ್ಯಾನ್ಸ ತಂಡದ 37 ವಿದ್ಯಾರ್ಥಿಗಳು
1 ಗಂಟೆ 34 ನಿಮಿಷ ಸತತ ಡ್ಯಾನ್ಸ್ ಮಾಡಿ ದಾಖಲೆ ಮಾಡಿದ್ದಾರೆ.

ಈ ರೆಕಾರ್ಡ್ ಕಾರ್ಯಕ್ರಮಕ್ಕೆ
ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಅವರು
ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಆಯೋಜಕರಾದ ಶಿವಮೊಗ್ಗ ವಿನೋದ್ ರಾಘವೇಂದ್ರ ಕೃಷ್ಣಮೂರ್ತಿ ಶರವಣ ಶಶಿಕುಮಾರ್ ಬಾಲರಾಜ್ ಪಂಚಪ್ಪ ಮೀನಾಕ್ಷಿ ನರಸಿಂಹಸ್ವಾಮಿ ಶ್ರೇಯಸ್ ಹರ್ಷಿತ ಇಂಚನ ಇವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ