ಜನಸ್ನೇಹಿ ಮತ್ತು ಸಮುದಾಯದತ್ತ ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸ್‌ ಇಲಾಖೆಯ ಕಾರ್ಯ ವೈಖರಿ, ಕಾನೂನಿನ ಕುರಿತಂತೆ ಪದವಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶ್ರೀ ಮಿಥುನ್‌ ಕುಮಾರ್‌ ಜಿ.ಕೆ ಪೊಲೀಸ್‌ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್‌ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ SPELP - (Student Police Experiential Learning Programme) ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದ್ದು, ಈಗಾಗಲೇ ಶಿವಮೊಗ್ಗ ಜಿಲ್ಲೆಯ ಆಯ್ದ 05 ಪದವಿ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಠಾಣಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿರುತ್ತದೆ.

ಸದರಿ ಕಾರ್ಯಮದ ಅಂಗವಾಗಿ ಈ ದಿನ ದಿನಾಂಕಃ 25-05-2024 ರಂದು ಶ್ರೀ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಡಿಎಆರ್‌ ಪೊಲೀಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಕಾರ್ಯ ಕ್ರಮವನ್ನು ಕುರಿತು ಮಾತನಾಡಿ ಪದವಿ ವಿಧ್ಯಾರ್ಥಿಗಳಿಗೆ ಈ ಕೆಳಕಂಡ ಮಾಹಿತಿಗಳನ್ನು ನೀಡಿದರು.

1) ಈ ಕಾರ್ಯಕ್ರಮದ ಅಡಿಯಲ್ಲಿ ಆಯ್ದ ವಿಧ್ಯಾರ್ಥಿಗಳಿಗೆ ಅಪರಾಧಿಕ ಕಾನೂನಿನ ಬಗ್ಗೆ ಅರಿವು, ಅಪರಾಧಗಳ ತನಿಖೆ, ಪ್ರಥಮ ವರ್ತಮಾನವನ್ನು ಬರೆಯುವ ಕುರಿತು, ಕೃತ್ಯ ನಡೆದ ಸ್ಥಳದ ಭೇಟಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ, ಪೊಲೀಸ್‌ ಗಸ್ತು ವ್ಯವಸ್ಥೆ, ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಬಗ್ಗೆ ಅರಿವು, ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನವ ಕಳ್ಳ ಸಾಗಾಣಿಕೆ, ವಿವಿಧ ಸ್ಥರಗಳಲ್ಲಿ ಪೊಲೀಸ್‌ ಇಲಾಖೆಯ ಕಾರ್ಯ ವೈಖರಿ ಹಾಗೂ ಇತರೆ ವಿಷಯಗಳ ಕುರಿತಂತೆ ವಿವರವಾದ ಮಾಹಿತಿಯನ್ನು ನೀಡಲಾಗುತ್ತದೆ.

2) ಪೊಲೀಸ್‌ ಇಲಾಖೆಯೊಂದಿಗೆ ಒಡನಾಟ, ಮತ್ತು ಕಾನೂನುಗಳ ಬಗ್ಗೆ ತಿಳುವಳಿಕೆ ಇಯಿಂದಾಗಿ ಸಾರ್ವಜನಿಕವಾಗಿ ಯಾವ ರೀತಿ ವ್ಯವಹರಿಸಬೇಕು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಇತರರಿಗೆ ಮಾದರಿಯಾಗಲು ಸಹಕಾರಿಯಾಗಿದೆ.

3) ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಧ್ಯಾರ್ಥಿಗಳು ಪೊಲೀಸ್‌ ಇಲಾಖೆ ಮತ್ತು ಇಲಾಖೆಯ ಸಮಾಜ ಮುಖಿ ಯೋಜನೆ ಗಳ ಬಗ್ಗೆ ತಿಳಿದು ಕೊಂಡು, ಅದನ್ನು ತಮ್ಮ ಒಡನಾಟದಲ್ಲಿರುವವರಿಗೆ ಮಾಹಿತಿ ನೀಡಿದಾಗ, ಸಾರ್ವಜನಿಕರಲ್ಲಿ ಪೊಲೀಸ್‌ ಇಲಾಖೆಯ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಅರಿವು ಬೆಳೆದು, ಪೊಲೀಸ್‌ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯವಿರುತ್ತದೆ.

4) ವ್ಯಕ್ತಿಗೆ ಕಾನೂನಿನ ಬಗ್ಗೆ ಅರಿವು ಇದ್ದಾಗ ಆತನು ಸಮಾಜದಲ್ಲಿ ಧೈರ್ಯವಾಗಿ ವ್ಯವಹರಿಸಲು ಮತ್ತು ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಲು ಸಾಧಿವಿರುತ್ತದೆ. ಆದ್ದರಿಂದ ನೀವೆಲ್ಲರೂ ಸದರಿ ಕಾರ್ಯಕ್ರಮದ ಸದುಪಯೋಗ ಪಡದುಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಾಬು ಆಂಜನಪ್ಪ ಡಿವೈಎಸ್.ಪಿ ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಪ್ರಕಾಶ್‌, ಡಿವೈಎಸ್.ಪಿ ಡಿಎಆರ್‌, ಶಿವಮೊಗ್ಗ, ಡಾ|| ಚನ್ನಪ್ಪ, ಬಿ.ಜಿ ಪ್ರಾಂಶುಪಾಲರು ಬಾಪೂಜಿ ಪದವಿ ಕಾಲೇಜು ಶಿವಮೊಗ್ಗ, ಡಾ|| ರೇಷ್ಮಾ, ಎನ್‌ ಎಸ್‌ ಎಸ್‌ ಕೋಆರ್ಡಿನೇಟರ್‌ ಮತ್ತು ಶಿವಮೊಗ್ಗ ನಗರದ ಪೊಲೀಸ್‌ ಅಧಿಕಾರಿಗಳು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ