ಕಪ್ಪತ್ತಗುಡ್ಡದ ರಮಣೀಯ ರಸದೌತನ ಸವಿಯಲು ಬರುವ ಪ್ರವಾಸಿಗರಿಗೆ ಮುಂಡರಗಿ ತಾಲೂಕಿನ ರಾಜ್ಯ ಮಟ್ಟದ ಜನಪದ ಕಲಾವಿದರಾದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಹಾಗೂ ಸಂಗಡಿಗರು ಕಪ್ಪತ್ತಗುಡ್ಡದಲ್ಲಿ ಸ್ವಚ್ಚತಾ ಕಾಪಾಡಲು ಹಾಗೂ ಗುಡ್ಡದ ಮಹತ್ವ ಸಾರುವ ನಿಟ್ಟಿನಲ್ಲಿ ಅನೇಕ ಜನಪದ ಜಾಗೃತಿ ಗೀತೆಗಳನ್ನು ಹೇಳುವದರ ಮೂಲಕ ಬಂದ ಪ್ರವಾಸಿಗರಿಗೆ ಅರಿವು ಮೂಢಿಸಿದರು, ಅನೇಕ ಸಸ್ಯ ಔಷಧೀಗಳ ಕಾಶಿ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರು ನಸುಕಿನ ಜಾವ ಇಬ್ಬನಿಯಿಂದ ಕೂಡಿದ ಉತ್ತರ ಕರ್ನಾಟಕದ ಸಂಹಾದ್ರಿ ನೋಡಲು ಕಿಕ್ಕಿರಿದು ಜನ ಬರುತ್ತಿದ್ಧಾರೆ. ಕಳೆದ 3ತಿಂಗಳಿನಿಂದ ಕಪ್ಪತ್ತಗುಡ್ಡ ನೋಡಲು ಬರುವ ಪ್ರವಾಸಿಗರು ಸುತ್ತಲೂ ಮೋಜು ಮಸ್ತಿ ಮಾಡುತ್ತಾ ಅನೈತಿಕ ಚಟುವಟಿಕೆಗಳನ್ನು ಮಾಡುವದಲ್ಲದೇ ಬೇಕಾ ಬಿಟ್ಟಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ, ಇದರಿಂದ ಪರಿಸರ ಮಾಲಿನ್ಯವಾಗುತ್ತದೆ,ಇದನ್ನರಿತ ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠ ತಮ್ಮ ಕಲಾ ತಂಡದೊಂದಿದೆ ಕಪ್ಪತ್ತಗುಡ್ಡದಲ್ಲಿ ಬಂದ ಪ್ರವಾಸಿಗರಿಗೆ ತಮ್ಮ ಸುಮಧುರ ಜನಪದ ಜಾಗೃತಿ ಹಾಡುಗಳ ಮೂಲಕ ಅರಿವು ಮೂಢಿಸುತ್ತಿದ್ಧಾರೆ.ಕಪ್ಪತ್ತಗುಡ್ಡದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ಆದ ಜನಪದ ಗತ್ತಿನ ಮೂಲಕ ಎಚ್ಚರಿಸುವದರೊಂದಿಗೆ ಕಪ್ಪತ್ತಗಿರಿಯ ಮಹತ್ವವನ್ನು ಸಾರುತ್ತಿದ್ಧಾರೆ. ಉಳಿಸಿ ಬೆಳಿಸಿ ಕಪ್ಪತ್ತಗುಡ್ಡ, ಪರಿಸರ ಜಾಗೃತಿಗಾಗಿ ಆಗೋನ ಬದ್ಧ , “ಕೇಳಿರಿ ಕೇಳಿರಿ ನಾಡಿನ ಜನಗಳೆ ಕಪ್ಪತ್ತಗುಡ್ಡ ದ ವೈಭವ,” ಅನ್ನುವಂತಹ ಮುಂತಾದ ಕಪ್ಪತ್ತಗುಡ್ಡದ ಜಾಗೃತಿ ಗೀತೆಗಳು ಜನರಲ್ಲಿ ಪರಿಸರ ಪ್ರೇಮವನ್ನು ತುಂಬಿದವು. ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರ ಜನಪದ ಕಲೆಯ ಮೂಲಕ ಮಾಡುತ್ತಿರುವ ಕಪ್ಪತ್ತಗಿರಿಯ ಪರಿಸರ ಜಾಗೃತಿಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಯಿತು.ಈ ಸಂದರ್ಭದಲ್ಲಿ ತೋಟೇಶ ಬೆಳದಡಿ, ಪರಶುರಾಮ ಅಳವುಂಡಿ, ರಮೇಶ ಅಳವುಂಡಿ, ರಾಜು ಹುಬ್ಬಳ್ಳಿ, ಶಾಂತವೀರೇಶ ಕೋಣಿ, ಸೇರಿದಂತೆ ಪರಿಸರ ಪ್ರೇಮಿಗಳು ಪಾಲ್ಗೋಂಡಿದ್ಧರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153