ದಾವಣಗೆರೆ ಜಿಲ್ಲೆಯ ಆರ್.ಟಿ. ಓ ನಂಬರ್, ಕೆ.ಎ 17 ಇ.ಟಿ 650 ಕ್ರಮಸಂಖ್ಯೆ ವಾಹನವನ್ನು ಓಂಕಾರ್ ಎಂಬವರು ಚಲಾಯಿಸಿಕೊಂಡು ಬಂದಿದ್ದಾರೆ. ತಪಾಸಣೆ ಮಾಡುವ ವೇಳೆ ಓಂಕಾರ್ ಹೆಲ್ಮೆಟ್ ಹಾಕಿಕೊಂಡಿರಲಿಲ್ಲ. ಪಶ್ಚಿಮ ಟ್ರಾಫಿಕ್ ಎ.ಎಸ್. ಐ ಮತ್ತು ಪಬ್ಲಿಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಎ.ಎಸ್.ಐ ಸುರೇಶ್ ಬಾಬು ದಾವಣಗೆರೆಯ ನಿವಾಸಿಯೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ. ಎ.ಎಸ್. ಐ ಸುರೇಶ್ ಬಾಬು 2ಸಾವಿರ ದಂಡಕಟ್ಟು ಎಂದು ಕಿರಿಕ್ ಮಾಡುತ್ತಾರೆ. ಓಂಕಾರ್ ನನ್ನ ಬಳಿ ಹಣವಿಲ್ಲ ತಪ್ಪಾಗಿದೆ ಬಿಡಿ ಎಂದಿದ್ದಾರೆ. ಆದರೆ ಸುರೇಶ್ ಬಾಬು ಅವಾಚ್ಯ ಶಬ್ದಗಳಿಂದ ಓಂಕಾರ್ರವರನ್ನು ಕರೆದಿದ್ದಾರೆ. ಓಂಕಾರ್ 500 ರೂ ತರೆಸಿಕೊಂಡು ದಂಡ ಕಟ್ಟಿದ್ದಾರೆ. ದಂಡ ಕಟ್ಟಿದ ನಂತರ ಅವಾಚ್ಯ ಶಬ್ದಗಳಿಂದ ಹೇಗೆ ಕರೆದಿರಿ ಎಂದು ಕೇಳಿದ್ದಾರೆ. ಜನ ಜಮಾವಣೆಗೊಂಡಿರುವ ದೃಶ್ಯವನ್ನು ಮಾಡಲು ಹೋದಾಗ ನೆರೆದ ಜನರೆಲ್ಲ ಸುರೇಶ್ ಬಾಬುಗೆ ತರಾಟೆ ತೆಗೆದುಕೊಂಡಿದ್ದಾರೆ. ಮಹಾವೀರ ವೃತ್ತದಲ್ಲಿ ಓಂಕಾರ್ ಗೆ ಗಾಡಿ ಜತೆ ನಿಲ್ಲಿಸಿ ಫೋಟೊ ತೆಗೆದುಕೊಂಡಿದ್ದಾರೆ. ಇದನ್ನು ಚಿತ್ರೀಕರಣ ಮಾಡಿಕೊಂಡು ಮಾಧ್ಯಮರ ಮೇಲೆ ಅವಾಚ್ಯ ಶಬ್ದಗಳಿಂದ ಸುರೇಶ್ ಬಾಬು ನಿಂದಿಸಿದ್ದಾರೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153