ಶಿವಮೊಗ್ಗ ರಾಜಕುಮಾರ್ ನೇತೃತ್ವದ ದಲಿತ ಸಂಘರ್ಷ ಸಮಿತಿಯ ಪರವಾಗಿ ಬೇಡರಹೊಸಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ರವಿಕುಮಾರ್ ಮತ್ತು ಚಂದ್ರಪ್ಪ ಎಂಬ ವ್ಯಕ್ತಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಸಹ ಸಂಚಾಲಕರಾದ ರಾಜಕುಮಾರ್ ಸೋಮಶೇಖರ್ ಎಂ, ನರಸಿಂಹ ಮೂರ್ತಿ, ಕೃಷ್ಣಪ್ಪ, ರವಿ, ಲೋಕೇಶ್ ಹಾಗೂ ಬೇಡರಹೊಸಹಳ್ಳಿ ಗ್ರಾಮಸ್ಥರು.