ಶಿವಮೊಗ್ಗ : ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಅಭಿವೃದ್ಧಿಯ ಹರಿಕಾರ, ಯುವ ನೇತಾರ, ಸೋಲಿಲ್ಲದ ಸರದಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ 4 ನೇ ಭಾರಿ ಅಭೂತಪೂರ್ವ ಗೆಲುವು ಸಾಧಿಸಿದ ಬಿ.ವೈ.ರಾಘವೇಂದ್ರ ಅವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ.ಧನಂಜಯ ಸರ್ಜಿ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.


ಈ ವೇಳೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ್ ಕುಲಕರರ್ಣಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ವೀರಯ್ಯ, ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್, ಡಾ.ಮಂಜುನಾಥ್, ವೈದ್ಯರಾದ ಡಾ.ಶೂನ್ಯ ಸಂಪದ್, ಡಾ. ವಿದ್ಯಾ ಸಂತೋಷ್, ಡಾ.ದ್ರಾಕ್ಷಾಯಣಿ, ಡಾ.ರಜತ್, ಡಾ.ವಿಜೇತ್, ಡಾ.ಪ್ರಶಾಂತ್ ಶ್ರೀಪುರಂ, ಡಾ.ಹರೀಶ್, ಡಾ.ಶಮಿತಾ, ಡಾ.ವಿಜಯ್, ಹರ್ಷ ಸರ್ಜಿ, ನಾಗವೇಣಿ ಸರ್ಜಿ, ಮಲವಗೊಪ್ಪ ಚಂದ್ರು ಮತ್ತಿತರರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ