ಶಿವಮೊಗ್ಗದ ವಿನೋಬ ನಗರದ ಸೂಡ ಕಛೇರಿ ಪಕ್ಕದ ರಸ್ತೆಯಲ್ಲಿ ಅನದಿಕೃತವಾಗಿ ರಸ್ತೆಗೆ ಆಡ್ಡಲಾಗಿ ನಿರ್ಮಿಸಿರುವ ಶೆಡ್ ತಕ್ಷಣ ತೆರುವುಗೊಳಿಸಿ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆ ಒಕ್ಕೂಟ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮನವಿ ನೀಡಿದರು.
ವಾಹನ ನಿಲುಗಡೆಗೆಗಾಗಿ ವಿನೋಬ ನಗರ 100 ಅಡಿ ರಸ್ತೆಯಿಂದ ಸೊಮಿನಕೊಪ್ಪ ರಸ್ತೆಗೆ ಸಂರ್ಕಿಸುವ ರಸ್ತೆಗೆ ಆಡ್ಡಲಾಗಿ, ನಗರಾಬಿವೃದ್ದಿ ಇಲಾಖೆಯವರೇ ನಿರ್ಮಿಸಿರುವ ಶೆಡ್ ತೆರುವುಗೊಸಲು ಈಗಾಗಲೇ ನಮ್ಮ ಸಂಸ್ಥೆ ಹೊರಾಟ ಮಾಡಿದ್ದು, ಮಾದ್ಯಮಗಳಲ್ಲಿ ವರದಿ ಆಗಿದೆ. ಆನಧಿಕೃತ ಶೆಡ್ ತೆರವುಗೊಳಿಸುವ ಜವಾಬ್ದಾರಿ ಪಾಲಿಕೆಗೆ ಇರುವುದರಿಂದ, ಸ್ವಯಂ ಪ್ರೇರಿತರಾಗಿ ತಾವೇ ಈ ಆನದಿಕೃತ ಶೆಡ್ ತೆರುವುಗೊಳಿಸುತ್ತೀರೆಂದು ನಾವು ಅಂದುಕೊಂಡಿದ್ದೇವು. ಆದರೆ ಪಾಲಿಕೆ ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ , ತಮಗೆ ಲಿಖಿತ ಮೂಲಕ ಈ ದೂರು ನೀಡುತ್ತಿದ್ದೇವೆ.
ದಯಮಾಡಿ ತಕ್ಷಣ ವಿನೋಬ ನಗರ 100 ಅಡಿ ರಸ್ತೆಯಿಂದ ಸೋಮಿನ ಕೊಪ್ಪ ರಸ್ತೆಗೆ ಸಂಪರ್ಕಿಸುವ ರಸ್ತೆಗೆ (ಸೂಡಾ ಕಛೇರಿ ಪಕ್ಕದ ರಸ್ತೆಗೆ) ಆಡ್ಡಲಾಗಿ ನಿರ್ಮಿಸಿರುವ ಶೆಡ್ ತೆರುವುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.