ಮೊದಲ ಬಾರಿಗೆ ಸಂಸತ್ ಚುನಾವಣೆಯಲ್ಲಿ ಗೆಲುವಿನ ಪತಾಕೆಯನ್ನು ಬ್ರಿಜೇಶ್ ಚೌಟ ಹಾರಿಸಿದ್ದಾರೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಶೆಟ್ಟಿ ಚೌಟರವರು ಭರ್ಜರಿ ಜಯ ಸಾಧಿಸಿದ್ದಾರೆ. ಅವರು ತಮ್ಮ ಹತ್ತಿರದ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು 149208 ಅಂತರದಿಂದ ಸೋಲಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 2 ಲಕ್ಷದ 73 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನು ಅನುಭವಿಸಿತ್ತು.
ಬ್ರಿಜೇಶ್ ಚೌಟ ಪಡೆದ ಒಟ್ಟು ಮತಗಳು 764132
ಪದ್ಮರಾಜ್ ಆರ್ ಪೂಜಾರಿ ಪಡೆದ ಒಟ್ಟು ಮತಗಳು 614924
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ 8000 ಮತಗಳು ಕಡಿಮೆ ಬಿದ್ದಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ 1ಲಕ್ಷದ 12 ಸಾವಿರ ಮತಗಳು ಹೆಚ್ಚು ಬಿದ್ದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ಪಕ್ಷ 46834 ಮತಗಳನ್ನು ಪಡೆದಿದ್ದಾರೆ. ಈ ಬಾರಿ ಎಸ್ ಡಿಪಿಐ ಕಣದಿಂದ ಹಿಂದೆ ಸರಿದುದರಿಂದ ಆ ಮತಗಳು ಕಾಂಗ್ರೆಸ್ ಗೆ ಬಿದ್ದಿರಬಹುದು ಎಂದು ಊಹಿಸಲಾಗುತ್ತಿದೆ.


ಕಾಂಗ್ರೆಸ್ ಅಭ್ಯರ್ಥಿ ಪ್ರಭಲ ಜಾತಿಗೆ ಸೇರಿದವರಾಗಿರುವುದರಿಂದ ಹಾಗೂ ಕಾಂಗ್ರೆಸ್ ಸರಕಾರ ಜನರಿಗೆ ನೀಡಿರುವ ಪಂಚ ಗ್ಯಾರಂಟಿಗಳು ಪಕ್ಷಕ್ಕೆ ಹೆಚ್ಚಿನ ಮತವನ್ನು ತಂದು ಕೊಡಬಹುದು. ಹೀಗಾಗಿ ಈ ಕ್ಷೇತ್ರದ ಚುನಾವಣೆ ಹೆಚ್ಚು ನಿಕಟ ಸ್ಪರ್ಧೆಯಿಂದ ಕೂಡಿರಬಹುದೆಂದು ಕಾಂಗ್ರೆಸ್ ಪಕ್ಷ ನಿರೀಕ್ಷಿಸಿತ್ತು . ಆದರೇ ತನಗೆ ತೊಡಕಾಗಬಹುದಾಗಿದ್ದ ಈ ಎರಡು ಅಂಸಗಳನ್ನು ಮೋದಿ ಪ್ಯಾಕ್ಟರ್ ಹಾಗೂ ಹಿಂದೂತ್ವದ ಮೂಲಕ ಬಿಜೆಪಿ ತೊಲಗಿಸಿತ್ತು.
ಅಲ್ಲದೇ ಕಳೆದ ಮೂರು ಬಾರಿ ಬಿಜೆಪಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸುವ ಮೂಲಕ ಅಡಳಿತ ವಿರೋಧಿ ಅಲೆಯನ್ನು ಕೂಡ ಮೆಟ್ಟಿ ನಿಂತಿತ್ತು.
ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದೆಂದು ನಿರೀಕ್ಷಿಸಲಾಗಿದ್ದ ನೋಟಾ ಭಾಗಶ: ಪರಿಣಾಮ ಭೀರುವಲ್ಲಿ ಮಾತ್ರ ಯಶಸ್ವಿಯಾಯಿತು. 23576 ಮತಗಳು ನೋಟಾ ಪಾಲಾದವು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ.

ಬ್ರಿಜೇಶ್ ಶೆಟ್ಟಿ ಚೌಟ – ಬಿಜೆಪಿ – 764132
ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 614924
ಅಂತರ – 149208
ನೋಟಾ – 23515

ವರದಿ ಪ್ರಜಾ ಶಕ್ತಿ