ಟಿ.ವಿ.ಸಿ ಸಭೆಯ ಮುಖಾಂತರ ನಡವಳಿಕೆಗಳು ಸರಿಯಾಗಿ ರಚನೆಯಾಗಬೇಕು, ಟಿ.ವಿ.ಸಿ ಸದಸ್ಯರುಗಳಿಗೆ 7 ದಿನ ಮುಂಚಿತವಾಗಿ ನೋಟಿಸನ್ನು ನೀಡಬೇಕು, ಪಟ್ಟಣ ವ್ಯಾಪಾರ ಸಮಿತಿ 100% ರಷ್ಟು ರಚನೆಯಾಗಬೇಕು, ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಟಿ.ವಿ.ಸಿಯಲ್ಲಿ ಆಯ್ಕೆಯಾದ ಸದಸ್ಯರುಗಳು ಇವರು ಮಾತ್ರ ಭಾಗಿಯಾಗಿರುತ್ತಾರೆ. ಟಿ.ವಿ.ಸಿಯಲ್ಲಿ ಹಾಗೂ ಇನ್ನು 60% ರಷ್ಟು ಯಾವುದೇ ಇಲಾಖೆ ವತಿಯಿಂದ ಟಿ.ವಿ.ಸಿ ಸಭೆಯಲ್ಲಿ ಯಾರು ಇದುವರೆಗೆ ಭಾಗಿಯಾಗಿರುವುದಿಲ್ಲ. ಟಿ.ವಿ.ಸಿಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ಸಮೀಕ್ಷೆಯಾಗಬೇಕು. ಟೈಲರಿಂಗ್ ಟೀಚರ್ ಗಣತಿದಾರರು ಬೀದಿ ಬೀದಿ ವ್ಯಾಪಾರಿಗಳ ಹೆಸರಿನಲ್ಲಿ ಬೇರೆಯವರಿಗೆ ಸಮೀಕ್ಷೆ ಮಾಡುತ್ತಿದ್ದಾರೆ ಹಾಗೂ ಟೈಲರಿಂಗ್ ಟೀಚರ್ ಗಣತಿದಾರರು ಇವರು ಸರಿಯಾಗಿ ಟಿ.ವಿ.ಸಿ ಮುಖಾಂತರ ಸಮೀಕ್ಷೆ ಮಾಡುತ್ತಿಲ್ಲ. ಟಿ.ವಿ.ಸಿ ಮುಖಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ನೀಡಬೇಕು. ಟಿ. ವಿ.ಸಿ ಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ವೆಂಡ್ಡಿಂಗ್ ಮಾಡಬೇಕು. ಟಿ.ವಿ.ಸಿ ಸದಸ್ಯರುಗಳಿಗೆ ಭತ್ಯ ನೀಡಬೇಕು. ಬೀದಿಬದಿ ವ್ಯಾಪಾರಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ತೆರವುಗೊಳಿಸುತ್ತಾರೆ. ನಮ್ಮ ವಲಯ ಟಿ. ವಿ .ಸಿ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಮ್ಮ ವಲಯದ ಯಾವುದೇ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವಂತಿಲ್ಲ. ಬೀದಿ ಬದಿ ವ್ಯಾಪಾರಿಗಳ ಹೆಸರಲ್ಲಿ ಮೋಟರ್ ಪರವನ್ನಾಗಿ ಗುರುತಿಸಿ ಚೀಟಿಯನ್ನು ಪಡೆಯುವಂತಿಲ್ಲ, ಹಾಗೂ ವಾಹನ ಮೋಟಾರ್ ಗಾಡಿಗಳು ಹಾಗೂ ಧ್ವನಿವರ್ಧಕ ಬಳಸಿಕೊಂಡು ವ್ಯಾಪಾರ ಮಾಡುವಂತಿಲ್ಲ ಅಂತಹ ವಾಹನ ಮೋಟರ್ ಗಳನ್ನು ರದ್ದುಪಡಿಸಬೇಕು ಟಿವಿಸಿ ಅಧ್ಯಕ್ಷರು. ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಂಸ್ಥೆಯವರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಅಧ್ಯಕ್ಷರು ಟಿ. ವಿ. ಸಿ ಮುಖಾಂತರ ನಿರ್ಬಂಧಿಸಬೇಕು. ಕಾನೂನಾತ್ಮಕವಾಗಿ ಬೀದಿಬದಿ ವ್ಯಾಪಾರಿಗಳಿಗೆ ಟಿ.ವಿ.ಸಿ ಮುಖಾಂತರ ಪರಿಹಾರವಾಗಿಬೇಕು. ಈ ರೀತಿಯ ಅಧ್ಯಕ್ಷರುಗಳಿಂದ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳಿಗೆ ಸರಿಯಾದ ರೀತಿಯಲ್ಲಿ ಗೌರವ ದೊರೆಯುತ್ತಿಲ್ಲ. ಪಟ್ಟಣ ವ್ಯಾಪಾರ ಸಮಿತಿ ಅಧ್ಯಕ್ಷರು 100% ರಷ್ಟು ಸಮಿತಿ ರಚನೆ ಮಾಡಬೇಕು. ಪಟ್ಟಣ ವ್ಯಾಪಾರ ಸಮಿತಿಯಲ್ಲಿ 60% ರಷ್ಟು ಎಲ್ಲಾ ಇಲಾಖೆ ವತಿಯಿಂದ ಇರಬೇಕು.ಪಟ್ಟಣ ವ್ಯಾಪಾರ ಸಮಿತಿಯಲ್ಲಿ 40% ರಷ್ಟು ಆಯ್ಕೆಯಾದ ಸದಸ್ಯರಗಳು ಇರಬೇಕು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153