ಶಿವಮೊಗ್ಗ ನಗರದಲ್ಲಿ ಪ್ರಥಮ ಬಾರಿಗೆ ಹಸಿದವರಿಗೆ “ನಿರಂತರ ಅನ್ನದಾಸೋಹ” ಸತ್ಕಾರ್ಯ ಯೋಜನೆ ಕೈಗೊಳ್ಳಲು ಸಮಾಲೋಚನಾ ಸಭೆ.
ಬೆಂಗಳೂರು ಹಾಗೂ ಇತರೆ ಕೆಲವು ನಗರಗಳಲ್ಲಿ ಈಗಾಗಲೇ ಪ್ರಚಲಿತವಾಗಿರುವ ನಿರಂತರ ಅನ್ನದಾಸೋಹ ಸೇವಾಕಾರ್ಯವನ್ನು ಶಿವಮೊಗ್ಗ ನಗರದಲ್ಲಿ ಪ್ರಾರಂಭಿಸಲು ಆಸಕ್ತರ ತಂಡ ಸಿದ್ದತೆ ನಡೆಸಿದೆ.
ಇಂತಹ ಪುಣ್ಯ ಕಾರ್ಯದಲ್ಲಿ ಕೈಜೋಡಿಸಲು ಸ್ವಯಂ ಪ್ರೇರಿತರಾಗಿ ಆಸಕ್ತಿ ಇರುವವರು ನಾಳೆ ಅಂದರೆ ದಿನಾಂಕ:16- 6-2024 ರ ಭಾನುವಾರ ಸಂಜೆ 4.30 ಗಂಟೆಗೆ ಸರಿಯಾಗಿ ಹೋಟೆಲ್ ಮಥುರಾ ಪ್ಯಾರಡೈಸ್, ಗಾಂಧಿ ಪಾರ್ಕ್ ಮುಂಭಾಗ, ಬಾಲರಾಜ್ ಅರಸ್ ರಸ್ತೆ ಇಲ್ಲಿನ ಸಭಾಂಗಣದಲ್ಲಿ ಕರೆದಿರುವ ಸಮಾಲೋಚನಾ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಈ ಯೋಜನೆಯ ಸಂಚಾಲಕರುಗಳಾದ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಸಹ್ಯಾದ್ರಿ ಸ್ನೇಹ ಸಂಘ ಮತ್ತು ಶ್ರೀ ಟಿ. ಆರ್. ಸತ್ಯನಾರಾಯಣ, ದೀಪಕ್ ಜ್ಯುವೆಲ್ಲರ್ಸ್, ಗಾಂಧಿ ಬಜಾರ್ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುತ್ತಾರೆ.