ರಕ್ತದಾನದ ಬಗ್ಗೆ ಜಾಗೃತಿ ಅಗತ್ಯವಾಗಿದ್ದು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಗೀತಾ ಲಕ್ಷಿö್ಮ ಅವರು ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹ್ಯಾದ್ರಿ ಕಲಾ ಕಾಲೇಜು, ರೆಡ್‌ಕ್ರಾಸ್, ಎನ್‌ಎಸ್‌ಎಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ರಕ್ತದಾನ ಮಹತ್ವವಾದುದ್ದು, ರಕ್ತವನ್ನು ಮತ್ತೆ ಸೃಷ್ಠಿಸಲು ಸಾಧ್ಯವಿಲ್ಲ. ಯುವಕರು ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕಾಗಿದೆ. ವಿದ್ಯಾರ್ಥಿಗಳ ಪಾತ್ರ ಇದರಲ್ಲಿ ಮಹತ್ವವಾದುದ್ದು ಮೂಡ ನಂಬಿಕೆಗಳಿAದ ದೂರು ಉಳಿದು ಒಬ್ಬರ ಪ್ರಾಣ ಉಳಿಸಲು ರಕ್ತದಾನ ಮಾಡಬೇಕು ಎಂದರು.


ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ಮಾತನಾಡಿ ರಕ್ತದಾನ ಮಾಡಿದವರು ಕೂಡ ರಕ್ತಸಂಬAಧಿಗಳೇ ಆಗುತ್ತಾರೆ. ಒಬ್ಬರ ಜೀವ ಉಳಿಸಲು ರಕ್ತದಾನ ಬಹಳ ಪಾವಿತ್ರವಾದದ್ದು,ಮುಂಬರುವ ದಿನಗಳಲ್ಲಿ ಸಹ್ಯಾದ್ರಿಯ ಮೂರು ಕಾಲೇಜುಗಳಿಂದ ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ಇವರ ನೆರವು ಪಡೆದು ರಕ್ತದಾನ ಶಿಬಿರವನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಲಾಗುವುದು ಎಂದರು.
23 ಬಾರಿ ರಕ್ತದಾನ ಮಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆಎನ್‌ಎನ್‌ಸಿ ಇಂಜಿನಿಯರ್ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಮಾತನಾಡಿ ರಕ್ತದಾನ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ. ರಕ್ತದಾನ ಬಹಳ ಪಾವಿತ್ರವಾದದ್ದು ಕೂಡ ಸಾಮಾನ್ಯವಾಗಿ ಹೆಣ್ಮಕ್ಕಳು ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಎಲ್ಲಾ ಆರೋಗ್ಯವಂತ ಹೆಣ್ಣುಮಕ್ಕಳು ಕೂಡ ರಕ್ತದಾನ ಮಾಡಬಹುದಾಗಿದೆ. ಮಹಿಳೆಯರಿಗೆ ಶೇ.33ರಷ್ಟು ರಿಯಾಯಿತಿ ಕೇಳುತ್ತಾರೆ. ಆದರೆ ಇದು ರಕ್ತದಾನಕ್ಕೆ ಅನ್ವಯಿಸುವುದು ಬೇಡ. ಮಹಿಳಾ ರಕ್ತದಾನಿಗಳ ಸಂಖ್ಯೆ ಹೆಚ್ಚಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆನೀಡಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್ ಜಿ.ಸಿ. ಎಷ್ಟೋ ಜನರು ರಕ್ತಸಿಗದೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗೆಯಾಗಬಾರದು. ರಕ್ತದಾನದ ಬಗ್ಗೆ ಇತ್ತೀಚನ ದಿನಗಳಲ್ಲಿ ಜಾಗೃತಿ ಮೂಡುತ್ತಿರುವುದು ಸ್ವಾಗತರ್ಹವಾಗಿದೆ. ಆದರೆ ಇದು ಮತ್ತಷ್ಟು ಹೆಚ್ಚಾಗಬೇಕು. ಸಹ್ಯಾದ್ರಿ ಕಾಲೇಜಿನಲ್ಲಿ ಒಂದು ಬಹು ದೊಡ್ಡ ರಕ್ತದಾನ ಶಿಬಿರವನ್ನು ಏರ್ಪಡಿಸಿ ಎಂದು ಸೂಚನೆ ನೀಡಿದರು.
ಕುವೆಂಪು ವಿವಿ, ಎನ್‌ಎಸ್‌ಎಸ್ ಸಂಯೋಜಕಿ ಡಾ. ಶುಭಮರವಂತೆ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ, ಕೊನೆ ಪಕ್ಷ ರಕ್ತದಾನ ಮಾಡಲು ಕೂಡ ಅರ್ಹರಾಗಿರಬೇಕು. ಯಾರ ನೆರವು ಇಲ್ಲದೇ ಮಾಡಬಹುದಾದ ಕೆಲಸ ಎಂದರೇ ರಕ್ತದಾನ ಮಾತ್ರ. ಹಿಂದೆಲ್ಲ ಪ್ರೇಮಿಗಳು ರಕ್ತದಲ್ಲಿ ಪ್ರೇಮಪತ್ರ ಬರೆಯುತ್ತಿದ್ದರಂತೆ ಹೀಗಾಗುವುದು ಬೇಡ, ರಕ್ತದಾನ ಮಾಡಿದರೆ ಸಾಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಸೈಯ್ಯದ್ ಸನಾವುಲ್ಲಾ ಮಾತನಾಡಿ ವರ್ಷದಲ್ಲಿ ಎರಡು ಪ್ರಮುಖ ದಿನಗಳು ಬರುತ್ತದೆ. ಒಂದು ರಕ್ತದಾನ ದಿನಾಚರಣೆ ಮತ್ತೊಂದು ರಕ್ತದಾನಿಗಳ ದಿನಾಚರಣೆ ಇವರೆಡೂ ಒಂದು ಜೀವವನ್ನು ಉಳಿಸಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇತ್ತೀಚಿಗೆ ಡ್ರಗ್ಸ್, ಡ್ರಿಂಕ್ಸ್ನAತಹ ದುಶ್ಚಟಗಳು ಹೆಚ್ಚಾಗುತ್ತಿದೆ. ಆರೋಗ್ಯವಂತರಾಗದಿದ್ದರೆ ರಕ್ತದಾನ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ರಕ್ತದಾನ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕ ಅಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಳ್ಳಿ, ಡಾ.ಮುದುಕಪ್ಪ, ಡಾ. ಹಾಲಮ್ಮ ಮುಂತಾದವರು. ಎನ್.ಎಂ.ಮAಗಳ, ಭರತ್, ಮೋನಿಕಾ ಇದ್ದರು.

ವರದಿ ಪ್ರಜಾ ಶಕ್ತಿ