ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ ಇರುವ ಕನ್ಸರ್ ವೆನ್ಸಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಸಾರ್ವಜನಿಕರು ಕಸವನ್ನು ಅಲ್ಲಿಯೇ ಎಸೆಯುತ್ತಿದ್ದರು ಇದರಿಂದ ಸದರಿ ಕನ್ಸರ್ ವೆನ್ಸಿಯು ಸಾರ್ವಜನಿಕ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿತ್ತು.

ಶ್ರೀ ತಿರುಮಲೇಶ್, ಪಿಎಸ್ಐ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, ಶ್ರೀ ಪ್ರಕಾಶ್ ಎಆರ್ ಎಸ್ ಐ, ಡಿಎಆರ್ ಶಿವಮೊಗ್ಗ, ಶ್ರೀ ಸಂದೀಪ್ ಸಿ ಹೆಚ್ ಸಿ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, ಶ್ರೀ ಪ್ರಕಾಶ್ ಸಿಪಿಸಿ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಮತ್ತು ಶ್ರೀ ಪ್ರಶಾಂತ್ ಸಿಪಿಸಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಮತ್ತು ವಿಕಾಸ್, ಹೆಲ್ತ್ ಇನ್ಸ್ಪೆಕ್ಟರ್, ಮಹಾನಗರ ಪಾಲಿಕೆ, ಶಿವಮೊಗ್ಗರವರು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಸಹಯೋಗದೊಂದಿಗೆ ಸದರಿ ಸ್ಥಳದಲ್ಲಿದ್ದ ಕಸ ಮತ್ತು ಗಿಡಗಂಟಿಗಳನ್ನು ಸ್ವಚ್ಚಗೊಳಿಸಿ, ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುತ್ತಾರೆ.

ಮಾನಸ ಆಸ್ಪತ್ರೆ ಮತ್ತು ಆ ಕಡೆಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಅಲ್ಲಿ ನಿಲುಗಡೆ ಮಾಡುವುದು. ಇದರಿಂದ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಸದರಿ ರಸ್ತೆಯಲ್ಲಿ ಈಗಾಗಲೇ ಬದಲೀ ದಿನಗಳಂದು ಪಾರ್ಕಿಂಗ್ ಮಾಡಲು ಅಧಿಸೂಚನೆಯನ್ನು ಹೊರಡಿಸಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ವರದಿ ಪ್ರಜಾ ಶಕ್ತಿ