ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷರಾದ ಡಾಕ್ಟರ್ ಕಡಿದಾಳ್ ಗೋಪಾಲರವರ ನೇತೃತ್ವದಲ್ಲಿ ಭದ್ರಾವತಿಯ ಜನರ ಜೀವಾಳವಾದ ವಿ ಐ ಎಸ್ ಎಲ್ ನ ಪುನರಾರಂಭ ಹಾಗೂ ನವೀಕರಣದ ವಿಚಾರವಾಗಿ ಭದ್ರಾವತಿಯ ಶ್ರೀಮತಿ ಶಾರದಾ ಅಪ್ಪಾಜಿ ಅವರ ನೊಳಗೊಂಡು ಜಿಲ್ಲಾ ಪದಾಧಿಕಾರಿಗಳ ತಂಡದೊಂದಿಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಭೇಟಿ ಮಾಡಿ ಪುನಃ ಚೇತನಕ್ಕೆ ಮನವಿಯನ್ನು ಸಲ್ಲಿಸಲಾಯಿತು.


ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಅಧಿಕಾರಿಗಳ ನಿಯೋಗವನ್ನು ಕರೆದು ಸಮಾಲೋಚಿಸಿ ಶೀಘ್ರವೇ ಪರಿಹಾರ ದೊರಕುತ್ತಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ರಾಮಕೃಷ್ಣ, ತ್ಯಾಗರಾಜ್ , ರಮೇಶ್ ನಾಯ್ಕ್, ಕರುನಾಮೂರ್ತಿ, ದೀಪಕ್ ,ಸಂಗಯ್ಯ, ಗೋಪಿ, ದಯಾನಂದ, ಮಧು ಕುಮಾರ್, ಕಾಂತ ಡಿ,ಉಮೇಶ್, ಗೀತಾ ಸತೀಶ್, ಗಿರೀಶ್, ಇನ್ನಿತರೆ ಮುಖಂಡರುಗಳು ಭಾಗಿಯಾಗಿದ್ದರು.

ವರದಿ ಪ್ರಜಾ ಶಕ್ತಿ