ಶ್ರೀಮತಿ ಅಪರ್ಣ ಎಂ ಕೊಳ್ಳ, ಸದಸ್ಯರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇವರು ಈ ದಿನ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರ, ಸರ್ಕಾರಿ ವೀಕ್ಷಣಾಲಯ, ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಸರ್ಕಾರಿ ಪ್ರಾಥಮಿಕ ಶಾಲೆ, ಗಾಡಿ ಕೊಪ್ಪ, ಶಿವಮೊಗ್ಗ ಸಾಗರ ತಾಲೂಕಿನ ರಾಮಕೃಷ್ಣ ವಿದ್ಯಾಲಯ ವಸತಿ ಶಾಲೆ , ನಮ್ಮ ವನಶ್ರೀ ವಸತಿ ಶಾಲೆ, ಸಾಗರ , ಅಂಗನವಾಡಿ ಕೇಂದ್ರ ಲೋಯರ್ ನಗರ ಸಾಗರ, ಬಿಸಿಎಂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯ ಸಾಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾವಿನಳ್ಳಿ, ಸಾಗರ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಸಾಗರ ಟೌನ್ ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸಾಗರ ಟೌನ್ , ಇಲ್ಲಿಗೆ ಭೇಟಿ ನೀಡಿ ಮಕ್ಕಳ ಮೂಲಭೂತ ಸೌಕರ್ಯಗಳು, ಆರ್ ಟಿ ಇ, ಮಕ್ಕಳ ಸುರಕ್ಷತಾ ನಿಯಮ 2016 ಮತ್ತು ಬಾಲ ನ್ಯಾಯ ಕಾಯ್ದೆ 2021ರ ಅಡಿಯಲ್ಲಿ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿರುತ್ತಾರೆ.

ವರದಿ ಪ್ರಜಾ ಶಕ್ತಿ