ಜೂನ್ 8 ರಿಂದ ಇಲ್ಲಿಯವರೆಗೆ ಗಾಂಜಾ ತಡೆಯುವ ನಿಟ್ಟಿನಲ್ಲಿ 61 ಪ್ರಕರಣ ದಾಖಲಿಸಿ 15.363 ಗ್ರಾಂ 5,56,560 ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಾಂಜಾ ತಡೆಗೆ ರಕ್ಷಣಾ ಇಲಾಖೆ ಸೂಕ್ತ ಕ್ರಮ ವಹಿಸಲಾಗುವುದು. ಸಾರ್ವಜನಿಕರು ತಮ್ಮ ಸುತ್ತಮುತ್ತ ಸೇವನೆ ಮಾರಾಟ ಮಾಡುವ ವ್ಯಕ್ತಿ ಕಂಡು ಬಂದರೆ ಪೊಲೀಸರಿಗೆ ತಿಳಿಸಬಹುದು ಎಂದರು. ಇತ್ತೀಚಿನ ದಿನಗಳಲ್ಲಿ 25ರ ವಯಸ್ಸಿನ ವಿದ್ಯಾರ್ಥಿಗಳು ಗಾಂಜಾ ಸೇವನೆಗೆ ಬಲಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜ್ ನಲ್ಲಿ ಗಾಂಜಾದಿಂದ ಆಗುವ ಅನಾಹುತಗಳ ಬಗ್ಗೆ ತಿಳುವಳಿಕೆ ಕಾರ್ಯಕ್ರಮ ಮಾಡುವುದು ಎಂದರು.
ಹೊಸಮನೆಯಲ್ಲಿ ಗಾಂಜಾ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಮಗನ ವಿರುದ್ಧವೇ ಪೋಷಕರು ಬಂದು ಗಮನಕ್ಕೆ ತಂದಿದ್ದರು. ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಪೋಷಕರು ತಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ಬಂದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದರು.