*
ಮಳೆಗಾಲ ಪ್ರಕೃತಿ ನಿಯಮ ಅದರ ಸವಿ ಸವಿಯಲು ಆಸಕ್ತ ಚಾರಣಿಗರನ್ನು ಒಂದೆಡೆ ಸೇರಿಸಿ, ಅದರೊಂದಿಗೆ ಬೆರೆತು ಚಾರಣ ಮಾಡುವುದು ಅದ್ಬುತ ಅನುಭವ ನೀಡುತ್ತದೆ ಎಂದು ತರೋಣದಯ ಘಟಕ ಆಯೋಜಿಸಿದ ‘ಮಳೆಗಾಲದ ಚಾರಣ’ ಉದ್ಘಾಟಿಸಿದ ವೈ.ಹೆಚ್.ಐ.ಎ.ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್ ತಿಳಿಸಿದರು.
ನಮ್ಮ ರಾಜ್ಯದಲ್ಲೆ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ ನಮ್ಮ ಶಿವಮೊಗ್ಗದ ‘ಹುಲಿಕಲ್ ಘಟ್’ ಈ ಪ್ರದೇಶದ ಸುತ್ತಲೂ ಮಾಣಿ, ಚಕ್ರ,ಸಾವಿ ಹಕ್ಲು,ಶರಾವತಿ ಮುಂತಾದ ಯೋಜನೆಗಳಿಂದ ಸುಂದರ ಪ್ರದೇಶಗಳನ್ನು ನೋಡುವುದೆ ಕಣ್ಣಿಗೆ ಹಬ್ಬ. ಇಂತಹ ಪ್ರದೇಶಕ್ಕೆ ತಾವೆಲ್ಲರೂ ಹೊರಟಿರುವುದರಿಂದ ಹಲವು ದಿನ ಇದರ ಗುಂಗಿನಿಂದ ಹೊರ ಬರುವುದು ಕಷ್ಟ, ಆಗಿಂದಾಗೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇದರಿಂದ ಉತ್ತಮ ಹವಾ, ದೇಹ ದಂಡಿಸುವುದರಿಂದ ಆರೋಗ್ಯಕ್ಕು ಕಸುವು ದೊರಕಲಿದೆ ಎಂದರು.
ರಾಷ್ಟ್ರೀಯ ಹಾಸ್ಟಲ್ ಕಮಿಟಿ ಸದಸ್ಯ ದಿಲೀಪ್ ನಾಡಿಗ್ ಮಾತನಾಡುತ್ತ, ನಮ್ಮ ರಾಜ್ಯ ಸದಸ್ಯತ್ವದಲ್ಲಿ ರಾಷ್ಟ್ರದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ಅತೀ ಕಡಿಮೆ ಖರ್ಚಿನಲ್ಲಿ ವಾಹನಗಳು ಹೋಗಲು ಆಗದ ಜಾಗಗಳಿಗೂ, ಚಾರಣಿಗ ಹೋಗಿ ಪ್ರಕೃತಿ ಆಸ್ವಾದಿಸಬಲ್ಲ. ಇದು ಯೂತ್ ಹಾಸ್ಟಲ್ಸ್ ನಿಂದ ಮಾತ್ರ ಸಾದ್ಯ ಎಂದರು.
ಈ ಸಂದರ್ಭದಲ್ಲಿ ಛೇರ್ಮನ್ ಎಸ್.ಎಸ್.ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್ ನಿರ್ದೇಶಕರಾದ ಡಾ.ಕೌಸ್ತುಭ,ಸುಮಾರಾಣಿ, ಡಾ.ಪ್ರಕೃತಿಮಂಚಾಲೆ, ರಮೇಶ್, ಗೌರೀಶ್, ಮಲ್ಲಿಕಾರ್ಜುನ್ ಮುಂತಾದವರಿದ್ದರು