ಶತಮಾನಗಳ ಇತಿಹಾಸವಿರುವ ನಮ್ಮ ಉಕ್ಕಿನ ನಗರಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇಂದು ಕಾರ್ಖಾನೆಯ ಆವರಣದ ಕಚೇರಿಯಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಭಾಗವಹಿಸಲಾಯಿತು.

ಕಾರ್ಖಾನೆ ಉಳಿಸಬೇಕು ಇದರೊಂದಿಗೆ ತನ್ನ ಇತಿಹಾಸದ ಗತವೈಭವವನ್ನು ಮರಳಿ ದೊರಕಿಸಿಕೊಡಬೇಕು, ಅವಲ೦ಬಿತ ಸಾವಿರಾರು ಕುಟುಂಬಗಳಿಗೆ ಉತ್ತಮ ರೀತಿಯ ಜೀವನೋಪಾಯ ಒದಗಿಸಬೇಕು, ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಧ್ವನಿಯಾಗಬೇಕು ಎಂಬ ನನ್ನ ಬದ್ಧತೆಯ ಮಾರ್ಗ ಸರಿ ದಾರಿಗೆ ಸಾಗುವವರೆಗೂ ವಿಶ್ರಾಂತಿ ಇಲ್ಲ ಎಂದು ಮತ್ತೊಮ್ಮೆ ವಾಗ್ದಾನ ಮಾಡುತ್ತಿದ್ದೇನೆ.

ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀಮತಿ ಶಾರದಾ ಪೂರ್ಯನಾಯಕ್ ಅವರು, ಶ್ರೀ ಸಂಗಮೇಶ್ವ ಅವರು ಮತ್ತು ಶ್ರೀ ಭೋಜೆಗೌಡ ಅವರು, ಪ್ರಮುಖರಾದ ಶ್ರೀ ಮಂಗೋಟೆ ರುದ್ರೇಶ್ ಅವರು, ಶ್ರೀ ಧರ್ಮ ಪ್ರಸಾದ್ ಅವರು, ಶ್ರೀಮತಿ ಶಾರದಾ ಅಪ್ಪಾಜಿ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ