ಶಿವಮೊಗ್ಗ ಟೌನ್ ರಾಗಿಗುಡ್ಡ ಚಾನಲ್ ಹತ್ತಿರ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ - ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ

1) ಸಂಕೇತ, 23 ವರ್ಷ, ಗೋಪಾಳ, ಶಿವಮೊಗ್ಗ ಟೌನ್, 2) ಅಂಬರೀಶ, 26 ವರ್ಷ, ನ್ಯೂ ಮಂಡ್ಲಿ, ಶಿವಮೊಗ್ಗ ಟೌನ್ ಮತ್ತು 3) ಧನುಷ್, 20 ವರ್ಷ, ಪುರಲೆ, ಶಿವಮೊಗ್ಗ ಟೌನ್ ರವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 68,000/- ರೂಗಳ 1 ಕೆಜಿ 243 ಗ್ರಾಂ ತೂಕದ ಒಣ ಗಾಂಜಾ ಮತ್ತು 2,350 ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0193/2024 ಕಲಂ 20(b), (II)B, 8(c) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ವರದಿ ಪ್ರಜಾ ಶಕ್ತಿ