ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ರಿ) ಬೆಂಗಳೂರು (ಕಾಸಿಯಾ) ನೂತನವಾಗಿ ಕಾಸಿಯಾ ಕೌನ್ಸಿಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಶ್ರೀ ಎಂ.ಎ ರಮೇಶ್ ಹೆಗಡೆಯವರಿಗೆ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಎನ್ ಗೋಪಿನಾಥ್‌ರವರು ಗೌರವ ಸನ್ಮಾನವನ್ನು ನೀಡಿದರು.

ಇದೇ ಸಂಧರ್ಬದಲ್ಲಿ ಅಧ್ಯಕ್ಷರು ಮಾತನಾಡಿ ಶ್ರೀ ರಮೇಶ್ ಹೆಗಡೆಯವರು ಮುಂದಿನ ದಿನಗಳಲ್ಲಿ ಕಾಸಿಯಾ ಸಂಘದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಲಿ ಎಂದು ಆಡಳಿತ ಮಂಡಳಿಯ ಪರವಾಗಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ. ಗೋಪಿನಾಥ್, ಕಾಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಎಂ. ರಾಜು ನಿರ್ದೇಶಕರುಗಳಾದ ಯು. ಮಧುಸೂದನ ಐತಾಳ್, ಈ ಪರಮೇಶ್ವರ್, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಎಲಿ, ಬಿ. ಮಂಜೇಗೌಡ, ಮರಿಸ್ವಾಮಿ, ಜಗದೀಶ್ ಮಾತನವರ್, ಗಣೇಶ್ ಎಂ. ಅಂಗಡಿ, ಪಿ.ಎಸ್ ಹಾಲಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ