ಜಿಲ್ಲೆಯಲ್ಲಿ ಡೆಂಗ್ಯೂ ತಡೆಯಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರಾದ ಇಮ್ರಾನ್ ಆಗ್ರಹ.

ಶಿವಮೊಗ್ಗ,
ಡೆಂಗ್ಯೂ ಜ್ವರ ವೇಗವಾಗಿ ಹರಡುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲಿ ಸುಮಾರು 7000ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಒಂದು ವರ್ಷದಲ್ಲಿ 100ಕ್ಕಿಂತ ಹೆಚ್ಚು ಕಂದಮ್ಮಗಳು ಬಲಿಯಾಗಿದ್ದು, ಕಳೆದ 24ಗಂಟೆಗಳಲ್ಲಿ 197 ಡೆಂಗ್ಯೂ ಪ್ರಕರಣಗಳು ಧೃಡವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 50 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ಜನರಿಗೆ ಭಯಭೀತರಾಗಿದ್ದಾರೆ, ಶಿವಮೊಗ್ಗ ಆರೋಗ್ಯ ಇಲಾಖೆ ಇದರ ಬಗ್ಗೆ ಸರಿಯಾದ ಗಮನ ಹರಿಸಬೇಕಾಗಿದೆ, ಚರಂಡಿಗಳ ಸ್ವಚ್ಛತೆಗೆ ಮತ್ತು ಖಾಲಿ ನಿವೇಶನಗಳ ಸ್ವಚ್ಛತೆಗೆ ಮುಖ್ಯ ಆದ್ಯತೆ ನೀಡಬೇಕು ಮತ್ತು ಅಗತ್ಯ ಔಷಧಿಗಳು ಪ್ರತಿ ಸರ್ಕಾರಿ ಆರೋಗ್ಯ ಕೇಂದ್ರ ಪೂರೈಸುವ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಸೊಳ್ಳೆ ಹೊಡೆಯುವ ಫಾಗಿಂಗ್ ಯಂತ್ರಗಳ ಮೂಲಕ ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ಕೇರಿ ಕೇರಿಗಳಲ್ಲಿ ಫಾಗಿಂಗ್ ಮಾಡಬೇಕಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಜನರ ಜೀವನ ನೆಮ್ಮದಿ ಕಾಪಾಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್.ಡಿ.ಪಿ.ಐ ಪಕ್ಷದ ಆಗ್ರಹ ಎಂದು ಜಿಲ್ಲಾಧ್ಯಕ್ಷರಾದ ಇಮ್ರಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.