ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ  ಶಿವಮೊಗ್ಗ-ಚೆನ್ನೈ ನಡುವೆ ಹೊಸ ರೈಲು ಸಂಚಾರಕ್ಕೆ ಸಂಸದ ಬಿ ವೈ ರಾಘವೇಂದ್ರ ಹಸಿರು ನಿಶಾನೆ ತೋರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿವಮೊಗ್ಗ – ಚೆನ್ನೈ ಎಕ್ಸ್‌ಪ್ರೆಸ್‌ ಸಂಪರ್ಕ ಸೌಲಭ್ಯದ ಜತೆಗೆ ಸ್ಥಳೀಯ ಆರ್ಥಿಕ ಅಭಿವೃದ್ಧಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳನ್ನೂ ಹೆಚ್ಚಿಸುತ್ತದೆ ಎಂದರು.

ಈ ಸಂಪರ್ಕ ಸೌಲಭ್ಯದ ಅಭಿವೃದ್ಧಿಗೆ ಅನುಮೋದನೆ ನೀಡಿದ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ. ಸೋಮಣ್ಣರವರಿಗೂ ಕ್ಷೇತ್ರದ ಜನತೆಯ ಪರವಾಗಿ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಶಿವಮೊಗ್ಗ TO ಚೆನ್ನೈ ವೇಳಾಪಟ್ಟಿ…

ಶನಿವಾರ ಸಂಜೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಸಂಜೆ 5.33ಕ್ಕೆ ಭದ್ರಾವತಿ, ಸಂಜೆ 5.53ಕ್ಕೆ ತರೀಕೆರೆ, ಸಂಜೆ 6.23ಕ್ಕೆ ಕಡೂರು, ಸಂಜೆ 6.34ಕ್ಕೆ ಬೀರೂರು, ರಾತ್ರಿ 7.10ಕ್ಕೆ ಅರಸೀಕೆರೆ, ರಾತ್ರಿ 7.36ಕ್ಕೆ ತಿಪಟೂರು, ರಾತ್ರಿ 8.28 ತುಮಕೂರು, ರಾತ್ರಿ 10.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌, ರಾತ್ರಿ 11.10ಕ್ಕೆ ಕೃಷ್ಣರಾಜಪುರಂ, ರಾತ್ರಿ 11.22ಕ್ಕೆ ಬಂಗಾರಪೇಟೆ , ರಾತ್ರಿ 12.27ಕ್ಕೆ ಜೋಲಾರ್‌ಪೆಟ್ಟೈ ಜಂಕ್ಷನ್‌, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.33ಕ್ಕೆ ಶೋಲಿಂಘುರ್‌, ರಾತ್ರಿ 3.03ಕ್ಕೆ ಅರಕೋಣಂ, ಬೆಳಗ್ಗೆ 4.13ಕ್ಕೆ ಪೆರಂಬೂರು, ಬೆಳಗ್ಗೆ 4.55ಕ್ಕೆ ಎಂಜಿಆರ್‌  ಸೆಂಟ್ರಲ್‌ ರೈಲು ನಿಲ್ದಾಣ ತಲುಪುತ್ತದೆ.

ಚೆನ್ನೈ TO ಶಿವಮೊಗ್ಗ ವೇಳಾಪಟ್ಟಿ…

ಶುಕ್ರವಾರ ರಾತ್ರಿ 11.30ಕ್ಕೆ ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣದಿಂದ ಹೊರಟು ರಾತ್ರಿ 12.23ಕ್ಕೆ ಅರಕೋಣಂ, ರಾತ್ರಿ 12.43ಕ್ಕೆ ಶೋಲಿಂಘುರ್‌, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.54ಕ್ಕೆ ಜೋಲಾರ್‌ಪೆಟ್ಟೈ ಜಂಕ್ಷನ್‌, ರಾತ್ರಿ 3.45ಕ್ಕೆ ಬಂಗಾರಪೇಟೆ , ರಾತ್ರಿ 4.39ಕ್ಕೆ ಕೃಷ್ಣರಾಜಪುರಂ, ಬೆಳಗ್ಗೆ 5.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಳಗ್ಗೆ 7.38ಕ್ಕೆ ತುಮಕೂರು, ಬೆಳಗ್ಗೆ 9.04ಕ್ಕೆ ತಿಪಟೂರು, ಬೆಳಗ್ಗೆ 9.30ಕ್ಕೆ ಅರಸೀಕೆರೆ, ಬೆಳಗ್ಗೆ 10.05ಕ್ಕೆ ಬೀರೂರು, ಬೆಳಗ್ಗೆ 10.20ಕ್ಕೆ ಕಡೂರು, ಬೆಳಗ್ಗೆ 10.47ಕ್ಕೆ ತರೀಕೆರೆ, ಬೆಳಗ್ಗೆ 11.33ಕ್ಕೆ ಭದ್ರಾವತಿ, ಮಧ್ಯಾಹ್ನ 12.20ಕ್ಕೆ ತಲುಪುತ್ತದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಾಸಕರಾದ ಶ್ರೀ ಚನ್ನಬಸಪ್ಪ , ವಿಧಾನ ಪರಿಷತ್ ಸದಸ್ಯರಾದ ಶ್ರೀ ಧನಂಜಯ ಸರ್ಜಿ ಹಾಗೂ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ