ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರಮಂಥನಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ದೂರವಿರಿಸುವ ಸಲುವಾಗಿ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು. ಶ್ರಾವಣ ಮಾಸದ_ಹಬ್ಬ_ಆಚರಣೆಗಳು; ಶ್ರಾವಣಮಾಸದಲ್ಲಿ ಹಬ್ಬಗಳು ಒಂದಾದ ಮೇಲೊಂದು ಸಾಲು-ಸಾಲಾಗಿ ಬರುತ್ತವೆ. ಶ್ರಾವಣ ಮಾಸವನ್ನು “ಹಬ್ಬಗಳ ಮಾಸ “ಎಂದು ಕರೆಯುವುದುಂಟು. ಶ್ರಾವಣ ಮಾಸ ಬಂತೆಂದರೆ ಎಲ್ಲರ ಮನೆಗಳಲ್ಲಿ ಸಡಗರವೋ ಸಡಗರ. ಎಲ್ಲ ದೇವ – ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ನಮ್ಮ ಸಂಪ್ರದಾಯ, ಸಂಸ್ಕೃತಿ ಪ್ರತಿಬಿಂಬಿತವಾಗುತ್ತದೆ. ಶ್ರಾವಣಮಾಸದಲ್ಲಿ ಮಂಗಳಗೌರಿ ವ್ರತ, ನಾಗರ ಪಂಚಮಿ, ನಾಗರ ಷಷ್ಠಿ, ಶ್ರಾವಣ ಶುಕ್ರವಾರಗಳು, ಶ್ರಾವಣ ಶನಿವಾರಗಳು, ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ,  ಶ್ರೀ ಕೃಷ್ಣ ಜನ್ಮಾಷ್ಟಮಿ, ಫಲಗೌರಿ ವ್ರತ ಹೀಗೆ … ಹಲವು ಹಬ್ಬಗಳ ಸಾಲು ಸಾಲು ಇವೆ.

*ಮಂಗಳಗೌರಿ ವ್ರತ*
: ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಆಚರಿಸುವ ವ್ರತವೇ ಈ ಮಂಗಳಗೌರಿ ವ್ರತ. ಶ್ರಾವಣ ಮಂಗಳ ಗೌರಿ ವ್ರತವು ತುಂಬಾ ಶುಭಪ್ರದವಾದುದು, ಮಂಗಳಕರವಾದುದು. ಈ ವ್ರತವನ್ನು ಸಕಲ ಭೋಗ ಭಾಗ್ಯ, ಸಕಲ ಸಂಪತ್ತನ್ನು, ಸುಮಂಗಲಿತನವನ್ನು ಪಡೆಯಲು ಆಚರಿಸುತ್ತಾರೆ.

*ನಾಗರ ಪಂಚಮಿ*
13-08-2021 ಶುಕ್ರವಾರ- : ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿ ದಿನದಂದು ಆಚರಿಸುವರು. ಈ ದಿನ ಮೂಲ ನಾಗಬನದಲ್ಲಿ ಮನೆಯ ಸಮೀಪದ ನಾಗಬನಗಳಲ್ಲಿ ನಂಬಿಕೊಂಡು ಬಂದ ನಾಗಬನಗಳಲ್ಲಿ  ನಾಗ ದೇವರಿಗೆ  ಹಾಲೆರೆದು ಪೂಜೆ ಮಾಡಿ, ನಾಗಾನುಗ್ರಹವನ್ನು ಪಡೆಯುತ್ತಾರೆ.

*ರಕ್ಷಾ ಬಂಧನ*
22-08-2021 ಭಾನುವಾರ: ಇದನ್ನು ರಾಕಿ ಹಬ್ಬ ಎಂದು ಕರೆಯುವರು. ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸುವರು ಇದು ಅಣ್ಣ-ತಂಗಿಯರ ಹಬ್ಬ. ರಕ್ಷಾ ಎಂದರೆ ರಕ್ಷಣೆ.

*ವರಮಹಾಲಕ್ಷ್ಮಿ ವ್ರತ* 20-08-2021 ಶುಕ್ರವಾರ
: ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಆಚರಿಸುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುವುದು. ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ವರಮಹಾಲಕ್ಷ್ಮಿಯ ವ್ರತವಿದು.

*ಕೃಷ್ಣ ಜಯಂತಿ( ಜನ್ಮಾಷ್ಟಮಿ)*30-08-2021
(ಈ ಸಂವತ್ಸರದಲ್ಲಿ ಅಷ್ಟಮಿಯಂದು ರೋಹಿಣಿ ನಕ್ಷತ್ರ ಬಂದಿರುವುದರಿಂದ ಕೃಷ್ಣ ಜಯಂತಿ ಎನಿಸಿದೆ )
: ದೇವಕಿ ಮತ್ತು ವಸುದೇವನ ಪುತ್ರನಾದ ಶ್ರೀ ಕೃಷ್ಣನು ಹುಟ್ಟಿದ ದಿವಸವನ್ನು ಶ್ರೀ ಕೃಷ್ಣಾಷ್ಟಮಿ ಎಂದು ಆಚರಿಸುತ್ತಾರೆ. ಇದು ವಿಷ್ಣುವಿನ ಎಂಟನೇ ಅವತಾರ. ಈ ಈ ಹಬ್ಬವನ್ನು ಗೋಕುಲಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂದು ಕರೆಯುವರು. ವೈಷ್ಣವರಿಗೆ ಇದು ತುಂಬಾ ಮುಖ್ಯವಾದ ಹಬ್ಬ.

ಲೇಖನ: ಸುಗಂಧಿ ವಕೀಲರು ಪ್ರಜಾಶ್ರೀ ಪತ್ರಿಕಾ ಸಂಪಾದಕರು ಬೆಂಗಳೂರು

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153