ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಅನುಟೆಕ್ ಅಂಗಡಿಯಲ್ಲಿ
ವ್ಯಕ್ತಿಯೊಬ್ಬನು ಅಂದಾಜು ಮೌಲ್ಯ 92,800/- ರೂ ಗಳ ಕಾಪರ್ ವೈರ್ ಖರೀದಿ ಮಾಡಿ ಹಣವನ್ನು ಕೊಡದೇ ವೈರ್ ತೆಗೆದುಕೊಂಡು ಹೋಗಿ ವಂಚಿಸಿರುತ್ತಾನೆಂದು ಅನುಟೆಕ್ ಅಂಗಡಿಯ ಮಾಲೀಕನಾದ ಶ್ರೀ ರಾಕೇಶ್, 40 ವರ್ಷ, ವಾಸ ಭದ್ರಾವತಿ ಟೌನ್ ರವರು ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0118/2024 ಕಲಂ:318(4) ಬಿಎನ್ಎಸ್ ರಿತ್ಯಾ
ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ವಂಚಿಸಿ ತೆಗೆದುಕೊಂಡು ಹೋದ ಮಾಲು ಮತ್ತು ಆರೋಪಿಯ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು,ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, ಮತ್ತು
ಶ್ರೀ ಕಾರಿಯಪ್ಪ ಎ.ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಶ್ರೀ ಗಜಾನನ ವಾಮನ ಸುತಾರ್ ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಮತ್ತು ಶ್ರೀಶೈಲಕುಮಾರ್, ವೃತ್ತ ನಿರೀಕ್ಷಕರು, ನಗರ ವೃತ್ತ, ಭದ್ರಾವತಿ ರವರ ಮಾರ್ಗದರ್ಶನದಲ್ಲಿ ಶ್ರೀ ಶರಣಪ್ಪ ಹಂಡ್ರಗಲ್ ಪಿಎಸ್ಐ -1 ಶ್ರೀ ಚಂದ್ರಶೇಖರ್ ನಾಯ್ಕ್ ಪಿಎಸ್ಐ-2 ಹಳೇನಗರ ಪೊಲೀಸ್ ಠಾಣೆ ರವರ ನೇತೃತ್ವದ ಮಹೇಶ್ವರ ನಾಯ್ಕ್ ಎ.ಎಸ್.ಐ, ಹೆಚ್ ಸಿ ರವರಾದ ಹಾಲಪ್ಪ, ಪಿಸಿರವರಾದ ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಸಣ್ಣತಂಗೇರ ಮತ್ತು ಪ್ರವೀಣ್ ಜಿ.ಎ. ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು
16ರಂದು ಪ್ರಕರಣದ ಆರೋಪಿ ಸೈಫುಲ್ಲಾಖಾನ್, 35 ವರ್ಷ, ಆಜಾದ್ ನಗರ, ದಾವಣಗೆರೆ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಪ್ರಕರಣ ಹಾಗೂ ಬಳ್ಳಾರಿ ಜಿಲ್ಲೆಯ ಗಾಂಧಿನಗರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿ ಒಟ್ಟು 02 ವಂಚನೆ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 2,07800/-ರೂಗಳ ವಿ-ಗಾರ್ಡ್ ಕಂಪನಿಯ ಕಾಪ್ಪರ್ ವೈರ್ ಬಾಕ್ಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 80,000/ರೂ ಬೆಲೆ ಬಾಳುವ ಸ್ಕೂಟಿ ಸೇರಿ ಒಟ್ಟು 2,87,800/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶ್ರೀ ಮಿಥುನ್ ಕುಮಾರ್ ಜಿ.ಕೆ. ಪೊಲೀಸ್ ಅಧೀಕ್ಷಕರು
ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.