“ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ – ಮಲೆನಾಡ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ”
ವಿಶ್ವಪ್ರಸಿದ್ಧ ನಮ್ಮ ಮಲೆನಾಡಿನ ಮುಕುಟಮಣಿ “ರಾಜ – ರಾಣಿ – ರೋರರ್ – ರಾಕೆಟ್” ಎಂಬ ಹೆಸರಿನಿಂದ ಜಗದ್ವಿಖ್ಯಾತಗಳಿಸಿರುವ “ಜೋಗ ಜಲಪಾತ” ಕ್ಕೆ ಸಂಸದ ಬಿ ವೈ ರಾಘವೇಂದ್ರ ಬೇಟಿ ನೀಡಿದರು.ಕಳೆದ ಅವಧಿಯ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಲಪಾತದ ಆವರಣದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಹಾಗೂ ವರ್ಷ ಪೂರ್ತಿ ಜಲಪಾತದ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವ ಸದುದ್ದೇಶದಿಂದ ಸುಮಾರು 185 ಕೋಟಿ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿ ಸ್ಥಳದಲ್ಲಿದ್ದ ಅಧಿಕಾರಿ ವರ್ಗದವರಿಗೆ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಲಾಯಿತು.
ಈ ಸಮಯದಲ್ಲಿ ಪ್ರಮುಖರಾದ ಶ್ರೀ ಪ್ರಕಾಶ್ ತಲಕಾಲಕೊಪ್ಪ ಅವರು, ಶ್ರೀ ಹಕ್ಕರೆ ಮಲ್ಲಿಕಾರ್ಜುನ್ ಅವರು, ಸ್ಥಳೀಯ ಹಾಗೂ ಅಧಿಕಾರಿಗಳು ಮುಖಂಡರು ಜೊತೆಯಲ್ಲಿದ್ದರು.