ದೇಶಕ್ಕಾಗಿ ನಾವು ಸಂಘಟನೆಯ ವತಿಯಿಂದ ಈಗಾಗಲೇ ತಾಲೂಕಿನ ಜನತೆಗೆ ಉಪಯೋಗವಾಗುವಂತಹ ಅನೇಕ ಮಾನವೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ನೆರವೇರಿಸಲು ಶ್ರಮಿಸಿದ್ದೇವೆ. ಕೊರೊನಾ ಎನ್ನುವ ಮಹಾಮಾರಿ ಕಾಯಿಲೆ ಬಂದಾಗಲೂ ಒಂದಿಲ್ಲೊಂದು ಕೆಲಸದಲ್ಲಿ ಸಂಘಟನೆಯ ಸತ್ಯಾಗ್ರಹಿಗಳು ಪಾಲ್ಗೊಂಡು ಜನರಲ್ಲಿ ಧೈರ್ಯ ತುಂಬಿಸುವ ಕೆಲಸವನ್ನು ಮಾಡಿದ್ದೇವೆ. ಈಗ ಮತ್ತೊಮ್ಮೆ ಮತ್ತೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂದಿನ ಜನತೆ ಹೆಚ್ಚಾಗಿ ಗದ್ದೆ ಉಳುಮೆಯನ್ನು ಮಾಡದೆ ಅದೇ ಭೂಮಿಗೆ ಮಣ್ಣು ತುಂಬಿ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗುತ್ತಿರುವಾಗ ಕೆಲವು ರೈತರು ಮಾತ್ರ ತಮ್ಮ ವಂಶಪಾರಂಪರ್ಯವಾಗಿ ಬಂದ ಗದ್ದೆಯಲ್ಲಿಯೇ ನಾಟಿ ಮಾಡಿ ಭತ್ತ ಬೆಳೆದು ನೆಮ್ಮದಿ ಕಂಡು ಕೊಂಡಿದ್ದಾರೆ. ಅದಕ್ಕಾಗಿಯೇ ನಮ್ಮ ಸಂಘಟನೆ ಈ ರೀತಿ ಗದ್ದೆಯಿದ್ದು ಕೃಷಿ ಮಾಡಲು ಸಾಧ್ಯವಾಗದ ಕುಟುಂಬವನ್ನು ಗುರುತಿಸಿ ಅವರ ಗದ್ದೆಯನ್ನು ನಾಟಿಮಾಡಿ ಕೊಡುವ ಅದರ ಸಂಪೂರ್ಣ ಖರ್ಚು ವೆಚ್ಚವನ್ನು ವ್ಯಯಿಸುವ ಹೊಸ ಮಾದರಿಯ ಕೆಲಸಕ್ಕೆ ಸಂಘಟನೆಯ ಸತ್ಯಾಗ್ರಹಿಗಳು ಮುಂದಾಗಿದ್ದೇವೆ. ಮೊದಲಿಗೆ ನಾವು ಕಟ್ಟೆಹಕ್ಕಲು ವ್ಯಾಪ್ತಿಯ ಕೆಳ ಅಂಕಣ ಎಂಬ ಹಳ್ಳಿಯ ಒಂದು ಬಡ ರೈತ ಕುಟುಂಬವನ್ನು ಗುರುತಿಸಿ ಅವರ ಗದ್ದೆಯ ನಾಟಿ ಮಾಡಿ ಕೊಡುವ ಕೆಲಸವನ್ನು ದಿನಾಂಕ 05.08.2021 ರ ಗುರುವಾರ ಹಮ್ಮಿಕೊಂಡಿದ್ದೇವೆ. ಮುಂದಿನ ಹಂತದಲ್ಲಿ ದಬ್ಬಣಗದ್ದೆ ವ್ಯಾಪ್ತಿಯ ಬಡ ರೈತ ಕುಟುಂಬಕ್ಕೆ ನೆರವು ನೀಡುವವರಿದ್ದೇವೆ. ಈ ವಿನೂತನ ಕಾರ್ಯಕ್ರಮದಲ್ಲಿ ನಮ್ಮ ಸಂಘಟನೆಯ ರಾಜ್ಯ ಸಂಚಾಲಕರಾದ ಶ್ರೀಯುತ ವಾಸುದೇವ ಮೂರ್ತಿ, ಖ್ಯಾತ ವಾಗ್ಮಿಗಳಾದ ಶ್ರೀಯುತ ನಿಕೇತ್ ರಾಜ್ ಮೌರ್ಯ, ಸಂಘಟನೆಯ ತೀರ್ಥಹಳ್ಳಿಯ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ ಕಾರ್ಯದರ್ಶಿಯಾದ ಪ್ರೇಮ ಅರಳಸುರುಳಿ, ಆದರ್ಶ್ ಹುಂಚದಕಟ್ಟೆ, ಸುಭಾಷ್ ಕುಲಾಲ್, ಹಕೀಮ್ ತೀರ್ಥಹಳ್ಳಿ, ಮತ್ತು ಸಂಘಟನೆಯ ಎಲ್ಲಾ ಸತ್ಯಾಗ್ರಹಿಗಳು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದ ಕೊನೆಯಲ್ಲಿ ಕೃಷಿಯ ಕುರಿತಾದ ಚಿಂತನ ಮಂಥನವನ್ನು ಹಮ್ಮಿಕೊಂಡಿದ್ದೇವೆ. ಮಾಹಿತಿಗಾಗಿ ಕಿರಣ್ ಕುಮಾರ್ ಸ್ನೇಹದಗೂಡು 9902930970 ,ಅಭಿ ಕೆಳಕೆರೆ 9482687649 ,ಯುವ ಆಚಾರ್ಯ 9148714509. ಅಜಿತ್ಅಣ್ಣುವಳ್ಳಿ 8722477269 ,ಸುಜಿತ್ ನೊಣಬೂರು 7019047754, ಸಂದರ್ಶ ಗೌಡ ಮೇಗರವಳ್ಳಿ 9148732194.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153