ಜನನ ,,15-3-1951 ರಂದು ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಬತ್ತು ಮಕ್ಕಳಲ್ಲಿ ಮೊದಲನೇ ಮಗನಾಗಿ ಜನಿಸಿದರು. ಆರಗದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ಬಡತನದ ಕಾರಣದಿಂದ ವಿಧ್ಯಾಭ್ಯಾಸ ಮೊಟಕುಗೊಳಿಸುವ ಹಂತದಲ್ಲಿ ಇದ್ದಾಗ ತಾರಗೊಳ್ಳಿ ನಾಗರಾಜ್ ರಾವ್ ಎನ್ನುವ ಆರ್, ಎಸ್, ಎಸ್ ಪ್ರಮುಖರ ಕಣ್ಣಿಗೆ ಬಿದ್ದ ಬಾಲಕ ಜ್ಞಾನೇಂದ್ರರನ್ನು ಬಿ.ಕಾಂ ವರೆಗೆ ಓದಿಸಿ ಶಿಕ್ಷಣ ಕೊಡಿಸಿದ ಕೀರ್ತಿ ಶ್ರೀಯುತರದ್ದು, ವಿಧ್ಯಾರ್ಥಿ ದೆಸೆಯಿಂದಲೆ RSS ಸಂಪರ್ಕ ಆರ್, ಎಸ್, ಎಸ್ ಪೂರ್ಣ ಶಿಕ್ಷಣ ಪಡೆದು ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದರು. ತುರ್ತು ಪರಿಸ್ಥಿತಿ ಹೋರಾಟದಲ್ಲಿ ಬಾಗಿ, 6 ತಿಂಗಳು ಜೈಲು ವಾಸ, ಪ್ರಥಮವಾಗಿ ತಾಲೂಕು ಬೋರ್ಡ್ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ,1983 ವಿದಾನಸಬಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧೆ ಕೇವಲ 2000 ಮತಗಳ ಅಂತರದಲ್ಲಿ ಸೋಲು,1985,1989, ರಲ್ಲಿ ಮತ್ತೆ ಸ್ಪರ್ಧೆ, ಸೋಲು, ಈ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇದರ ಮಧ್ಯ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ದಿಸಿ ಗೆದ್ದಿದ್ದರು. ಇದೇ ಸಂಧರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟಕ್ಕೆ ನಿರ್ಧೆಶಕರಾಗಿ ಆಯ್ಕೆಯಾಗಿ ಶಿಮೂಲ್ ಅಧ್ಯಕ್ಷರಾಗಿಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. 1994 ರ ಚುನಾವಣೆಯಲ್ಲಿ ಡಿ. ಬಿ ಚಂದ್ರೆಗೌಡರನ್ನು ಸೋಲಿಸಿ ವಿದಾನಸಬೆಗೆ ಆಯ್ಕೆಯಾದರು. ಆನಂತರದಲ್ಲಿ ಸತತ ಮೂರು ಗೆಲುವು , ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾಲರು ಎನ್ನುವ ಧಾಖಲೆ ಮುರಿದು ಸತತ ಮೂರು ಗೆಲುವು ಮುಡಿಗೇರಿಸಿಕೊಂಡರು. 2008 ರಲ್ಲಿ ಸೋಲು 2013 ರಲ್ಲಿ ಸೋಲು, 2018 ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಯಾರು ಗೆಲ್ಲದೇ ಇರುವಷ್ಟು ದಾಖಲೆಯ 22000 ಅಂತರದ ಗೆಲುವು ಅವರದ್ದು. ಈ ಮಧ್ಯೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ರಾಗಿ ಕಾರ್ಯ ನಿರ್ವಾಹಕ, ಅಡಿಕೆ ಬೆಳೆಗಾರರ ಪರವಾಗಿ ಸತತ ಹೋರಾಟ, ಹತ್ತಾರು ಬಾರಿ ಅಡಿಕೆ ಬೆಳೆಗೆ ಸಂಕಷ್ಟ ಬಂದಾಗಲೆಲ್ಲ ನಿಯೋಗದೊಂದಿಗೆ ದೆಹಲಿಗೆ ಬೇಟಿ ಕೇಂದ್ರ ಸರ್ಕಾರದ ಮುಂದೆ ಅಡಿಕೆ ಪರವಾಗಿ ಹೋರಾಟ ಮಾಡಿದ್ದರು. ಅಡಿಕೆ ಬೆಳೆಗಾರರ ಹಿತದ್ರುಷ್ಟಿಯಿಂದ ರಾಜ್ಯ ಸರ್ಕಾರದಿಂದ ರಚನೆಯಾದ ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆ ರಾಜ್ಯಾಧ್ಯಕ್ಷ, ಮತ್ತು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಒಂದೇ ಪಕ್ಷ ಒಂದೇ ಸಿದ್ದಾಂತ ಸುಮಾರು ನಲವತ್ತೈದು ವರ್ಷಗಳ ಸುಧೀರ್ಘ ಅನುಭವ, 1983 ರ ಚುನಾವಣೆಯಲ್ಲಿ ಯುಡಿಯೂರಪ್ಪನರ ಜೊತೆ ಚುನಾವಣೆಗೆ ಸ್ಪರ್ಧೆ ಮಾಡಿದ ಕೆಲವೇ ನಾಯಕರಲ್ಲಿ ಜ್ಞಾನೇಂದ್ರ ಒಬ್ಬರು, ಸೈದ್ದಾಂತಿಕ ಬದ್ದತೆ, ಪ್ರಾಮಾಣಿಕ ರಾಜಕಾರಣ, ಪಕ್ಷ ನಿಷ್ಠೆ, ಜನಪರ ಹೋರಾಟ ಜ್ಞಾನೇಂದ್ರರವರ ಜೀವನದ ಶೈಲಿಗಳು, ಮಡದಿ 2 ಮಕ್ಕಳೊಂದಿಗೆ ತೀರ್ಥಹಳ್ಳಿ ಗುಡ್ಡೇಕೊಪ್ಪ ದಲ್ಲಿ ಹಳ್ಳಿಯಲ್ಲಿ ವಾಸವಾಗಿದ್ದರು. ಪತ್ನಿ -ಪ್ರಫುಲ್ಲ ಗ್ರಹಿಣಿ, ಮಗ -ಅಭಿನಂದನ್ ಎಂ. ಬಿ.ಎ ಪದವಿದರ ಪತ್ನಿ ಶ್ರತಿ ಮಗುವಿನ ಜೊತೆ ತಮ್ಮೂರು ಗುಡ್ಡೇಕೊಪ್ಪದಲ್ಲಿ ಕ್ರಷಿಕ ಕಾರ್ಯ, ಮಗಳು ಅನನ್ಯ ತೀರ್ಥಹಳ್ಳಿ ತಾಲೂಕು ಜಡ್ಡಗದ್ದೆ ಮೂಲದ ಐ.ಎಫ್.ಎಸ್ ಅಧಿಕಾರಿ ಸಮರ್ಥ್ ಜೊತೆ ಮದುವೆಯಾಗಿ ಮದುರೈನಲ್ಲಿ ವಾಸವಾಗಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153