ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜೇಶ್ವರಿ ಸಿ.ಎನ್.ಸಿ ಮಿಷಿನಿಂಗ್ ಟೆಕ್ನಾಲಜಿ ಫ್ಯಾಕ್ಟರಿಯ ಏರ್ ವೆಂಟಿಲೇಟರ್ ಮೂಲಕ ಕಳ್ಳರು ಫ್ಯಾಕ್ಟರಿಯ ಒಳಗೆ ಕೈಚಳಕ ತುಳಸಿದ್ದಾರೆ.ಸ್ಟೀಲ್ ಕ್ಯಾಸ್ಟ್ರೀಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0095/2024 ಕಲಂ 454, 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನೀಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಶ್ರೀಶೈಲ್ ಕುಮಾರ್ ಸಿಪಿಐ ನಗರ ವೃತ್ತ ರವರ ನೇತೃತ್ವದ ಶ್ರೀ ಟಿ ರಮೇಶ್ ಪಿಎಸ್ ಐ ನ್ಯೂಟೌನ್ ಪೊಲೀಸ್ ಠಾಣೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ಶ್ರೀ ಟಿ ಪಿ ಮಂಜಪ್ಪ ಎ ಎಸ್ ಐ ಸಿಹೆಚ್ ಸಿ ರವರಾದ ನವೀನ್, ರಾಘವೆಂದ್ರ, ಮತ್ತು ಸಿಪಿಸಿ ಪ್ರಸನ್ನ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ 22-07-2024 ರಂದು ಪ್ರರಕಣದ ಆರೋಪಿಗಳಾದ 1) ಗಂಗಾಧರ್ ಎಸ್, 28 ವರ್ಷ, ವಾಸ ಜೇಡಿಕಟ್ಟೆ ಹೂಸೂರು, ಭದ್ರಾವತಿ, 2) ಮಹಮದ್ ಇಮ್ರಾನ್ ಖಾನ್, 35 ವರ್ಷ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ. 3) ಮಹಮದ್ ಹಪೀಜುಲ್ಲಾ, 33 ವರ್ಷ ನಂಜಪ್ಪ ಲೇ ಔಟ್ ಮದಾರಿಪಾಳ್ಯ ರಸ್ತೆ ಶಿವಮೊಗ್ಗ, 4) ಮುಷ್ತಾಕೀಂ @ ಮುಸ್ತು, 22 ವರ್ಷ, ದೊಣಭಘಟ್ಟ ಭದ್ರಾವತಿ ಇವರನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 1,40,000/- ರೂ ಗಳ 1ಟನ್ ತೂಕದ 40 ಸ್ಟೀಲ್ ಕ್ಯಾಸ್ಟೀಂಗ್ ಪೀಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 5,00,000/- ರೂ ಬೆಲೆಯ ASHOK LAYLAND DOST ವಾಹನವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.