BUNTS DOCTORS DAY…

ಶಿವಮೊಗ್ಗದ ಆರೋಗ್ಯ ಕ್ಷೇತ್ರದಲ್ಲಿ ಬಂಟ ವೈದ್ಯರುಗಳ ಸೇವೆ ಅವಿಸ್ಮರಣೀಯ – ಡಾ.ಸತೀಶ್ ಕುಮಾರ್ ಶೆಟ್ಟಿ

ಶಿವಮೊಗ್ಗ ಬಂಟರ ಭವನದಲ್ಲಿ ಬಂಟ್ಸ್ ಮಹಿಳಾ ವಿಭಾಗದ ವತಿಯಿಂದ ಆಯೋಜನೆಗೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮವು ಅದ್ದೂರಿಯಿಂದ ನೆರವೇರಿತು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶಿವಮೊಗ್ಗದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಬಂಟ ಸಮಾಜದ 35 ಜನ ಹಿರಿಯ ಮತ್ತು ಕಿರಿಯ ವೈದ್ಯರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ರವರು ಬಂಟ ಸಮುದಾಯ ಕರಾವಳಿಯಿಂದ ಮಲೆನಾಡಿಗೆ ಬಂದು ಇಲ್ಲಿ ಸುಮಾರು 60 -70 ವರ್ಷಗಳಿಂದ ನೆಲೆಸಿ ಆರೋಗ್ಯ ಕ್ಷೇತ್ರ, ಹೋಟೆಲ್ ಉದ್ದಿಮೆ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ವಿಶೇಷವಾಗಿ ಬಂಟ ಸಮಾಜದ ವೈದ್ಯರು ಶಿವಮೊಗ್ಗದ ಪ್ರತಿಷ್ಠಿತ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿ ಅವಿಸ್ಮರಣೀಯ ಸೇವೆ ಮಾಡುತ್ತಿದ್ದಾರೆ ಎಂದರು.

ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಎಸ್. ಶೆಟ್ಟಿ ಮಾತನಾಡಿ ವೈದ್ಯರ ದಿನಾಚರಣೆ ಅಂಗವಾಗಿ ಬಂಟ ಸಮಾಜದ ವೈದ್ಯರಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವ ಉದ್ದೇಶಕ್ಕಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಂಟ ಸಮಾಜದ ಪ್ರಮುಖರಾದ ಎಂ ಕೆ ಸುರೇಶ್ ಕುಮಾರ್, ದಿವಾಕರ್ ಶೆಟ್ಟಿ ಮಹೇಶ್ ಶೆಟ್ಟಿ ರಾಜೀವ್ ಶೆಟ್ಟಿ, ಡಾ.ಅಮಿತ ಹೆಗ್ಡೆ, ಪ್ರಭಾವತಿ ಎಸ್ ಶೆಟ್ಟಿ, ಕಿಲಕ ಎಂ. ಮಧುಸೂದನ್, ವಾತ್ಸಲ್ಯ ಎಸ್. ಶೆಟ್ಟಿ , ಜ್ಯೋತಿ ಡಿ. ಶೆಟ್ಟಿ, ಶೃತಿ ಎಂ. ಶೆಟ್ಟಿ, ಬಂಟ್ಸ್ ಪುರುಷ ಮತ್ತು ಮಹಿಳಾ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ