ಕೇಂದ್ರ ಸರ್ಕಾರವು ಅಧಿಕಾರದ ಗದ್ದುಗೆ ಕೇಳಿದಾಗಿನಿಂದ ಒಂದಾದ ಮೇಲೊಂದರಂತೆ ಕಾರ್ಮಿಕ ವಿರೋಧಿ ರೈತ ವಿರೋಧಿ ಒಟ್ಟಾರೆಯಾಗಿ ಜನವಿರೋಧಿ ನೀತಿಗಳನ್ನು ಸತತವಾಗಿ ಜಾರಿಗೊಳಿಸುತ್ತಾ ಬಂದಿದೆ ಜನಸಾಮಾನ್ಯರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಜನರ ಹಿತಾಸಕ್ತಿಗಳನ್ನು ಬಲಿಕೊಟ್ಟು ಕಾರ್ಪೊರೇಟ್ ದಣಿಗಳ ಹಿತಾಸಕ್ತಿಗೆ ಮುಂದಾಗಿರುವುದು ತೀರಾ ಖಂಡನೀಯ ಈ ಎಲ್ಲಾ ನೀತಿಗಳ ವಿರುದ್ಧದ ಹೋರಾಟದ ಮುಂದುವರಿಕೆಯಾಗಿ ಆಗಸ್ಟ್ 09 ರಂದು ಅಖಿಲ ಭಾರತ ಮಟ್ಟದ ಭಾರತ ರಕ್ಷಿಸಿ ದಿನವನ್ನಾಗಿ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಕರೆ ನೀಡಿವೆ. ಇದನ್ನು ಯಶಸ್ವಿಗೊಳಿಸಬೇಕೆಂದು ಜೆಸಿಟಿಯು ಜನಸಾಮಾನ್ಯರಲ್ಲಿ ವಿಶಿಷ್ಟವಾಗಿ ಕಾರ್ಮಿಕ ಸಮುದಾಯದಲ್ಲಿ ಕೇಳಿಕೊಳ್ಳುತ್ತಿದೆ. ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳು, ರೈತ ವಿರೋಧಿ, ಕೃಷಿ ಕಾಯಿದೆಗಳು ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ. ಉದ್ಯೋಗ ಜೀವ ಮತ್ತು ಜೀವನಾಂಶದ ಬಿಕ್ಕಟ್ಟನ್ನು ಬಗೆಹರಿಸಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ ಲಾಕ್ ಡೌನ್ ಅಥವಾ ಅಂತಹ ಯಾವುದೇ ಸಂದರ್ಭದಲ್ಲಿ ಕೈಗಾರಿಕೆ ಸೇವಾ ವಲಯ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಕ್ಕೆ ಮತ್ತು ವೇತನ ಕಡಿತವನ್ನು ನಿಷೇಧಿಸಿ ಸರ್ಕಾರಿ ಇಲಾಖೆಗಳಲ್ಲಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಪ್ರತಿವರ್ಷ 3% ಖಾಲಿ ಹುದ್ದೆಗಳ ರದ್ದುಗೊಳಿಸುವಿಕೆಯನ್ನು ನಿಲ್ಲಿಸಿ ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸದಂತೆ ಮಾಡಲಾಗಿರುವ ಆದೇಶವನ್ನು ಹಿಂಪಡೆಯಿರಿ. ನರೇಗಾ ಬಜೆಟ್ ಕೆಲಸದ ದಿನಗಳು ಮತ್ತು ಕೂಲಿಯ ಮೊತ್ತವನ್ನು ಹೆಚ್ಚಿಸಿ. ನಗರ ಮಟ್ಟದ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ಕೆಲಸದ ಹಕ್ಕನ್ನು ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಿ. ಆದಾಯ ತೆರಿಗೆ ಪಾವತಿಸದ ಎಲ್ಲ ಕುಟುಂಬಗಳಿಗೆ ಮಾಸಿಕ 7500 ರುಪಾಯಿ ನಗದು ವರ್ಗಾವಣೆ ಖಾತ್ರಿಪಡಿಸಿ.ಮುಂದಿನ 6 ತಿಂಗಳವರೆಗೆ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆಜಿ ಉಚಿತ ದವಸ ಧಾನ್ಯ ನೀಡಿ. ಆರೋಗ್ಯ ಬಜೆಟ್ಟನ್ನು ಹೆಚ್ಚಿಸಿ ಎಲ್ಲ ಹಂತಗಳಲ್ಲೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಕೋವಿಡೆತರ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೂಕ್ತ ವ್ಯವಸ್ಥೆ ಕಲ್ಪಿಸಿ.ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಿ ಕಾರ್ಪೊರೇಟ್ ಪರ ವ್ಯಾಕ್ಸಿನೇಷನ್ ನೀತಿಯನ್ನು ರದ್ದುಗೊಳಿಸಿ.ಮಹಾಮಾರಿ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಮುಂಚೂಣಿ ಕೋವಿಡ‍ ಯೋಧರಿಗೆ ಅಗತ್ಯ ಸಲಕರಣೆಗಳನ್ನು ಒದಗಿಸಿ ಮತ್ತು ವಿಮಾ ರಕ್ಷಣೆ ಒದಗಿಸಿ. ಸಾರ್ವಜನಿಕ ಉದ್ದಿಮೆಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಸಗೀಕರಣ ಮತ್ತು ಹೂಡಿಕೆ ಹಿಂಪಡೆತ ನಿಲ್ಲಿಸಿ. ಜನವಿರೋಧಿ ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ 2021 (EDSO) ರದ್ದುಗೊಳಿಸಿ. ಅಗತ್ಯ ವಸ್ತುಗಳು ಪೆಟ್ರೋಲ್ ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಕೆಯನ್ನು ತಹಬದಿಗೆ ತನ್ನಿ. ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ 43, 44 ಮತ್ತು 45ನೇ ನೀವು ನಿರ್ಣಯಗಳನ್ನು ಜಾರಿಗೆ ತರುವ ಮೂಲಕ ಸ್ಕೀಮ್ ವರ್ಕರ್ ಗಳಿಗೆ ಕಾರ್ಮಿಕರ ಸ್ಥಾನಮಾನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ. ILO ಸಮ್ಮೇಳನದ 87, 98, 109 ಸಂಖ್ಯೆಯ ಗೊತ್ತುವಳಿಗಳನ್ನು ಅಂಗೀಕರಿಸಿ ಎಂದು ತಿಳಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153