ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಹಳೆ ಜೈಲು ಬ್ರಿಟಿಷರ ಕಾಲದಲ್ಲಿ ಕಟ್ಟಿದ್ದು ಮತ್ತು ಹಳೆ ಜೈಲಿನ ಮುಂದೆ ಇರುವ ಈಶ್ವರ ಹಾಗೂ ಆಂಜನೇಯ ಸ್ವಾಮಿಯ ದೇವಾಲಯವನ್ನು ದಶಕಗಳ ಹಿಂದೆ ಅಂದಿನ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ಮಿಸಿದ್ದರು ನಂತರ ಅದನ್ನು ಕ್ರಮೇಣ ಜೈಲಿನ ಆಡಳಿತ ಮಂಡಳಿ ನಿರ್ವಹಣೆ ಮಾಡುತ್ತಾ ಬಂದಿದ್ದರು. ಆದರೆ ಹೊಸ ಜೈಲು ಉದ್ಘಾಟನೆಯಾದ ನಂತರ ಆ ಸ್ಥಳವನ್ನು ಜಿಲ್ಲಾಡಳಿತ ಕರ್ನಾಟಕ ರಾಜ್ಯ ಕೈಗಾರಿಕಾ ಪೊಲೀಸ್ ಮೀಸಲು ಪಡೆ ಹಾಗೂ ಪೊಲೀಸ್ ಇಲಾಖೆಗೆ ಸ್ಥಳಾಂತರಿಸಿತ್ತು. ಇದರಿಂದ ದಶಕಗಳಿಂದ ಸಾವಿರಾರು ಭಕ್ತಾದಿಗಳು ನಡುವೆ ನಡೆದುಕೊಂಡು ಹೋಗುವ ದೇವಾಲಯಗಳಿಗೆ ನಿರ್ವಹಣೆ ಮಾಡುವವರು ಯಾರು ಇಲ್ಲದಂತಾಗಿದೆ. ಹಾಗಾಗಿ ಜಿಲ್ಲಾಡಳಿತ ಈ ಕೂಡಲೇ ಈ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರ್ಪಡಿಸಿ ದೇವಾಲಯಗಳ ಅಭಿವೃದ್ಧಿ ಪಡಿಸಬೇಕು ಮತ್ತು ಇಲ್ಲಿ ದಶಕಗಳಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಅರ್ಚಕರಿಗೆ ಅದೇ ದೇವಾಲಯದಲ್ಲಿ ನೇಮಕಮಾಡಿ ವೇತನವನ್ನು ನೀಡಬೇಕು ಎಂದು ಈ ಮೂಲಕ ವಿನಂತಿಸುತ್ತಾರೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153