
ಶಾಸಕ ಚನ್ನಬಸಪ್ಪ ಕರ್ತವ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ತಪ್ಪು ಮಾಡಿಲ್ಲವೆಂದರೆ ಸದನದಲ್ಲಿ ವಿಪಕ್ಷದವರು ಕೇಳಿದ ಪ್ರಶ್ನೆಗೆ ಉತ್ತರ ಕೊಡದೆ ಯಾಕೆ ಓಡಿ ಹೋಗಿದ್ದಾರೆ. ಅವರು ಮೂಡ ಹಗರಣದಲ್ಲಿ ನಿರಪರಾಧಿ ಎಂದ ಮೇಲೆ ಹೆದರಿಕೆ ಯಾಕೆ.ಅವರು ಆರೋಪ ಮುಕ್ತರಾಗಿ ಬರಲಿ ನಾವು ಅವರ ಪಾದ ತೊಳೆದು ಪೂಜೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಪ್ರಜಾಪ್ರಭುತ್ವದಲ್ಲಿ ಕಾನೂನು ಪಾಲಿಸಬೇಕಾದ ಕಾಂಗ್ರೆಸ್ ಪಕ್ಷ ಕಾನೂನಿಗೆ ದಿಕ್ಕರಿಸಿ ನಡೆದುಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬಾಂಗ್ಲಾ ರೀತಿಯಲ್ಲಿ ರಾಜ್ಯಪಾಲರ ಮೇಲೆ ದಾಳಿ ನಡೆಸಲಾಗುವುದು ಎಂದು ಹೇಳಿರುವುದು ಖಂಡನೆಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.