ಶಿವಮೊಗ್ಗ ಟೌನ್ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಲೇಔಟ್ 3 ನೇ ಕ್ರಾಸ್ ನಲ್ಲಿರುವ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ & ಸ್ಪಾ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಡಿವೈಎಸ್ ಪಿ ಶಿವಮೊಗ್ಗ ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀಮತಿ ಚಂದ್ರಕಲಾ, ಪಿಐ ವಿನೋಬನಗರ ಪೊಲೀಸ್ ಠಾಣೆ ಮತ್ತು ಶ್ರೀ ಭರತ್ ಕುಮಾರ್ ಪಿಐ ಮಹಿಳಾ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ದಾಳಿ ನಡೆಸಿ, ಇಬ್ಬರು ಸಂತ್ರಸ್ಥ ಮಹಿಳೆಯರನ್ನು ರಕ್ಷಣೆ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ. ಸ್ಪಾ ಮಾಲೀಕರಾದ ಸೌಮ್ಯ ಕೋಂ ಪ್ರಭು, 33 ವರ್ಷ, ಮಿಳಘಟ್ಟ ಶಿವಮೊಗ್ಗ ಟೌನ್ ಈಕೆಯನ್ನು ದಸ್ತಗಿರಿ ಮಾಡಿ IMMORAL TRAFFIC PREVENTION ACT ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಪ್ರಜಾ ಶಕ್ತಿ