ಜೋಡುಕೆರೆ ಕಂಬಳ…
ಮೊದಲ ಬಾರಿಗೆ ಮಲೆನಾಡಿನ ಶಿವಮೊಗ್ಗದಲ್ಲಿ ಕಂಬಳ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ಬೆಳಪು ದೇವಿ ಪ್ರಸಾದ್ ಶೆಟ್ಟಿ ರವರು ಮಾತನಾಡಿ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಡೆಸಿ ಯಶಸ್ವಿಯಾಗಿದೆ.ಅದೇ ರೀತಿ ಶಿವಮೊಗ್ಗದಲ್ಲೂ ಸಹ ಕಂಬಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಕರಾವಳಿಯಲ್ಲಿ ಪ್ರಸಿದ್ಧವಾದ ಕಂಬಳ ಕಳೆದ ವರ್ಷ ಬೆಂಗಳೂರು ರಾಜಧಾನಿಯಲ್ಲಿ ನಡೆಸಿ ಯಶಸ್ವಿಯಾಗಿದೆ. ಈಗ ಮಲೆನಾಡಿನ ಶಿವಮೊಗ್ಗದಲ್ಲಿ ತುಂಗ ಭದ್ರಾ ಜೋಡುಕೆರೆ ಕಂಬಳ ಏಪ್ರಿಲ್ 19 ಮತ್ತು 20 2025 ರಂದು ನಗರದ ಮಾಚೇನಹಳ್ಳಿಯಲ್ಲಿ ಕಂಬಳ ನಡೆಯಲಿದೆ. ಈ ಕಂಬಳದಲ್ಲಿ 100ಕು ಹೆಚ್ಚು ಕೋಣಗಳು ಭಾಗವಹಿಸುತ್ತವೆ.ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ರವರ ನೇತೃತ್ವದಲ್ಲಿ ಕಂಬಳವು ನಡೆಯಲಿದೆ. ತೀರ್ಥಹಳ್ಳಿಯ ಹೆಗಲತ್ತಿ ಶ್ರೀ ನಾಗಯಕ್ಷಿ ದೇವಸ್ಥಾನದ ಕಲ್ಪನಾ ಸಂತೋಷ್ ರವರು ಕಂಬಳಕ್ಕೆ ಸಹಕಾರ ನೀಡಲಿದ್ದಾರೆ.
ಕಂಬಳಕ್ಕೆ ಬೇಕಾದ ಪ್ರಮುಖವಾಗಿ ಜಾಗದ ವ್ಯವಸ್ಥೆಯನ್ನು ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ರವರು ಮಾಡಿದ್ದಾರೆ.ಪಶು ಸಂಗೋಪನೆ ಇಲಾಖೆ ವತಿಯಿಂದ ಅನುಮತಿ ,ಕೆರೆ ನಿರ್ಮಾಣ , ಕೋಣಗಳಿಗೆ ನೀರು ನೆರಳಿನ ವ್ಯವಸ್ಥೆ , ಕಲ್ಪಿಸಬೇಕಾಗಿದೆ. ಸದ್ಯದಲ್ಲಿ ಕಂಬಳದ ಭೂಮಿ ಪೂಜೆ ಸಹ ನಡೆಯಲಿದೆ.
ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷರಾದ ಲೋಕೇಶ್ ಶೆಟ್ಟಿ ಮಾತನಾಡಿ ಶಿವಮೊಗ್ಗದಲ್ಲಿ ಕಂಬಳ ನಡೆಸುವುದಕ್ಕೆ ಜಾಗದ ವ್ಯವಸ್ಥೆ ಆಗಿದೆ. ಕಂಬಳಕ್ಕೆ ಸಂಬಂಧಪಟ್ಟ ಕೆಲಸಗಳು ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಯಶಸ್ವಿ ಆದ ತರಾನೇ ಮಲೆನಾಡು ಶಿವಮೊಗ್ಗದಲ್ಲೂ ಕಂಬಳ ಯಶಸ್ವಿಯಾಗಿ ನಡೆಸಿ ಕೊಡಬೇಕಾಗಿ ಜನತೆಯಲ್ಲಿ ವಿನಂತಿಸಿದರು. ಸದ್ಯದಲ್ಲಿ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.