ಪಾಲಿಕೆ ರಸ್ತೆಯಲ್ಲಿ ಅನಧಿಕೃತ ಸೂಡ ಶೆಡ್ ತೆರವಿಗೆ ಆಗ್ರಹಿಸಿ ನಾಗರಿಕ ಹಿತ ರಕ್ಷಣಾ ವೇದಿಕೆ ಒಕ್ಕೂಟದಿಂದ ಅಹೋರಾತ್ರಿ ಧರಣಿ ಮುಂದುವರೆದಿದೆ.ಒಂದು ವಾರದ ಗಡುವು ಪಾಲಿಕೆಗೆ ನೀಡಿದರೂ ಅಧಿಕೃತ ರಸ್ತೆಯಲ್ಲಿ ಆನಧಿಕೃತ(ಲೈಸೆನ್ಸ ಇಲ್ಲದೆ) ರಸ್ತೆ ಮಾಡಿದರೂ, ಪಾಲಿಕೆ ಅಥವಾ ಜಿಲ್ಲಾಡಳಿತ ನಿರ್ಲಕ್ಷ ಈ ರೀತಿ ಆಹೋರಾತ್ರಿ ಧರಣಿಗೆ ಕಾರಣ ಎಂದು ವೇದಿಕೆ ತಿಳಿಸಿದೆ.

3 ತಿಂಗಳ ಹಿಂದೆಯೇ ದೂರು ನೀಡಿ, ಬೃಹತ್ ಹೋರಾಟ ಮಾಡಿದರೂ ಒಂದೇ ಒಂದು ಮೀಟಿಂಗ್ ಮಾಡಿಲ್ಲ ಅಥವಾ ಪರಿಹಾರ ಕೊಡಿಸಿಲ್ಲ ಎಂದರು.ನಾವು ಈ ವಿಚಾರವಾಗಿ ಬೇಟಿ ಆದಾಗ ಸೌಜನ್ಯ ವರ್ತಿಸಿಲ್ಲ ಎಂಬ ನೊವು ನಮ್ಮಲ್ಲಿ ಇದೆ.ಈ ಎಲ್ಲಾ ನೊವಿನಲ್ಲಿ ಪಾಲಿಕೆ ಎದುರು ರಸ್ತೆಯಲ್ಲಿ ಪ್ರತಿಭಟನೆ  ಈ ರಾತ್ರಿ ಕಳೆಯುತ್ತಿದ್ದೇವೆ ಎಂದರು.