ಗೌರಿ ಮತ್ತು ಗಣೇಶ ಹಬ್ಬದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಸಿ ಯೋಗೇಶ್ ರವರು ಮಹಾನಗರ ಪಾಲಿಕೆ ಆಯುಕ್ತರು ಶ್ರೀಮತಿ ಡಾ. ಕವಿತಾ ಯೋಗಪ್ಪನವರ್ ರವರೊಂದಿಗೆ ,ಜಲ ಮಂಡಳಿ ಅಧಿಕಾರಿಗಳಾದ ಕಾರ್ಯಪಲಕ ಅಭಿಯಂತರ ರವಿಕುಮಾರ್ ಮನವಿ ಸಲ್ಲಿಸಿದರು.

ಗಣಪತಿ ಹಬ್ಬ ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರು ವಿಜೃಂಭಣೆಯಿಂದ ಸಂಭ್ರಮ ಸಡಗರೊಂದಿಗೆ ಪ್ರತಿ ಮನೆಯಲ್ಲೂ ಆಚರಿಸುವ ಹಬ್ಬವಾಗಿದ್ದು ಪ್ರಮುಖವಾಗಿ ನೀರಿನ ವ್ಯವಸ್ಥೆ 24/7 ನಲ್ಲಿ ನೀರು ವಿತರಿಸುವ ಬದಲು ಹಳೆ ನಲ್ಲಿಯಲ್ಲಿ ಹಬ್ಬ ಮುಗಿವವರೆಗೂ ನೀರನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ವಿನಂತಿಸಿದರು.ಗಣಪತಿ ವಿಸರ್ಜಿಸಲು ಅನುಕೂಲವಾಗುವಂತೆ ಟ್ರ್ಯಾಕ್ಟರ್ ಗಳಲ್ಲಿ ನೀರಿನ ಡ್ರಮ್ ತೆಗೆದುಕೊಂಡು ಪ್ರತಿ ವಾರ್ಡ್ ಗಳಿಗೂ ತಲುಪಿಸುವ ವ್ಯವಸ್ಥೆಯನ್ನು ಹಾಗೂ ಸುಸರ್ಜಿತವಾಗಿ ಹಬ್ಬ ಆಚರಿಸಲು ಜಲಮಂಡಳಿಯಿಂದ ಬೇಕಾದ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಹೆಚ್ಚಿಸಿಕೊಂಡು ಅವಶ್ಯಕತೆ ಇದ್ದವರಿಗೆ ಈ ಕೂಡಲೇ ನೀರನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿದರು.

ನಗರದಲ್ಲಿನ ಪ್ರತಿದಿನದ ನೀರಿನ ಅಭಾವದ ಕುರಿತು ಹಾಗೂ 24/7 ನೀರಿನ ವ್ಯವಸ್ಥೆಯ ಕುರಿತು ದೀರ್ಘಕಾಲದ ಚರ್ಚೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಮಾಜಿ ನಗರ ಸಭಾಧ್ಯಕ್ಷರು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ ರವರು, ಮಾಜಿ ಒಬ್ಬ ಮಹಾಪೌರರಾದ ಶ್ರೀಮತಿ ವಿಜಯಲಕ್ಷ್ಮಿ ಸಿ ಪಾಟೀಲ್ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು, ಯಮನ ರಂಗೇಗೌಡ ರವರು, ಆರ್‌ಸಿ ನಾಯಕ್ ರವರು, ಮೆಹಕ್ ಷರೀಫ್ ರವರು, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕೆ ರಂಗನಾಥ್ ರವರು, ರಂಗೇಗೌಡರವರು, ನೂರುಲ್ಲಾ ರವರು, ಗಂಗಾಧರ್ ರವರು, ನವೀನ್ ಕುಮಾರ್ ರವರು, ಮಧು ಕುಮಾರ್ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ