ಸಂಸದ ಶ್ರೀ ಬಿ ವೈ ರಾಘವೇಂದ್ರ ರವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ  ಶ್ರೀ ಹರ್ದಿಪ್ ಸಿಂಗ್ ಪುರಿ ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಫಾರಂ ಸ್ಥಾಪನೆಗೆ ಆಗುತ್ತಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ಪ್ರಸ್ತುತ ದೂರದ ಇಂಧನ ಮೂಲ ಸ್ಟೇಷನ್ ಗಳಿಂದ ಇಂಧನವನ್ನು ಎತ್ತುವ ವಿಮಾನಯಾನ ಸಂಸ್ಥೆಗಳಿಂದ ಉಂಟಾಗುವ ಹೆಚ್ಚಿನ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಪಾರ್ಕ್ ಸ್ಥಾಪಿಸುವುದು ಅತ್ಯಗತ್ಯವಾಗಿದ್ದು ವಿವರಿಸಿದರು.

ಈಗಾಗಲೇ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ವತಿಯಿಂದ (KSSIDC) ಏಪ್ರಿಲ್-2023 ರಲ್ಲಿ IOCL (INDIN OIL CORPORATION LIMITED) ಗೆ ಒಪ್ಪಂದ ಮಾಡಿಕೊಂಡು, ಅದನ್ನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಿರುವ ಪ್ರಸ್ತಾವನೆಯು IOCL ಅಧ್ಯಕ್ಷರ ಬಳಿ ಬಾಕಿ ಇದ್ದು ಸದರಿ ಪ್ರಸ್ತಾವನೆಯನ್ನು ಆದಷ್ಟು ಬೇಗನೆ ಇತ್ಯರ್ಥ ಪಡಿಸಲು IOCL ಅಧ್ಯಕ್ಷರಿಗೆ ಅಗತ್ಯ ನಿರ್ದೇಶನ ನೀಡುವಂತೆ ಸಚಿವರನ್ನು ಸಂಸದರು ಕೋರಿದ್ದಾರೆ.

ಈ ಬಗ್ಗೆ ಸಚಿವರು ಸಕಾರಾತ್ಮಕ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಫಾರಂ ಸ್ಥಾಪಿಸಿದಲ್ಲಿ ಪ್ರಯಾಣದ ವೆಚ್ಚ ಸಹ ಕಡಿಮೆಯಾಗುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಮತ್ತು ತ್ವರಿತಗತಿಯಲ್ಲಿ ವಿಮಾನಯಾನ ಹಾರಾಡಲು ಅನುಕೂಲವಾಗುತ್ತದೆ. ಹಾಗೂ ಹಲವು ವಿಮಾನಯಾನ ಕಂಪನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಯಾನವನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

ವರದಿ ಪ್ರಜಾ ಶಕ್ತಿ