ದಿನಾಂಕ 04-08-2021 ರಂದು ಮಧ್ಯಾಹ್ನ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸದ್ಗುರು ಲೇಔಟ್ ನಲ್ಲಿ ಎರಡು ಜನ ವ್ಯಕ್ತಿಗಳು ಓಮಿನಿ ವಾಹನವನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ. ಐ ಸಾಗರ ಟೌನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಾಳಿ ನಡೆಸಿ ಆರೋಪಿತರಾದ 1. ಇಮ್ರಾನ್ ಖಾನ್, 25 ವರ್ಷ ಕೆಳದಿ ರಸ್ತೆ ಸಾಗರ ಟೌನ್ 2. ಇಂತಿಯಾಜ್ ಲೇ, 28 ವರ್ಷ ಕೆಳದಿ ರಸ್ತೆ, ಸಾಗರ ಟೌನ್ ರವರನ್ನು ವಶಕ್ಕೆ ಪಡೆದು ಆರೋಪಿತ ರಿಂದ ಅಂದಾಜು ಮೌಲ್ಯ 20,000/- ರೂಪಾಯಿಗಳ ಒಟ್ಟು 1 ಕೆಜಿ 60 ಗ್ರಾಂ ತೂಕದ ಒಣ ಗಾಂಜಾವನ್ನು, ರೂ 800 ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಓಮಿನಿ ವಾಹನವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153