OPS ಜಾರಿಗೊಳಿಸುವಂತೆ ಡಾ ಪರಿಸರ ನಾಗರಾಜ್ ಎಡಿಸಿ  ಸಿದ್ದಲಿಂಗ ರೆಡ್ಡಿರವರಿಗೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕಳೆದ 10
ವರ್ಷಗಳಿಂದ ಹಳೆ ಪಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ನಿರಂತರ ಹೋರಾಟ
ನಡೆಸುತ್ತಿರುವುದು ವಿಷಯವಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು
ರಾಷ್ಟ್ರಮಟ್ಟದಲ್ಲಿ NMOPSನ ಸಹಯೋಗವನ್ನು ಹೊಂದಿದೆ.


ಮಂದುವರೆದು, ದಿನಾಂಕ :19.09.2024 ರಂದು ನವದೆಹಲಿಯಲ್ಲಿ ನಡೆದ NMOPSನ ರಾಷ್ಟ್ರೀಯ ಕಾರ್ಯಕಾರಿಣಿಯ ತೀರ್ಮಾನದಂತೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS
ನೌಕರರ ಸಂಘ ಹಾಗೂ NATIONAL MOVEMENT FOR OLD PENSION SCHEME(R) NEWDELHI, (NMOPS)
ಸಂಘಟನೆಗಳು Old Pension Scheme ಗಾಗಿ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರವು NPS
ಯೋಜನೆಯನ್ನು ಬದಲಾಯಿಸಿ, ಏಕೀಕೃತ ಪಂಚಣಿ ಯೋಜನೆಯನ್ನು (UPS) ಜಾರಿಗೆ ತರಲು ತೀರ್ಮಾನಿಸಿದೆ. ಸದರಿ ಯೋಜನೆಯು ಸಹ ಷೇರು ಮಾರುಕಟ್ಟೆ ಆಧಾರಿತವಾಗಿದ್ದು , ಸರ್ಕಾರಿ ನೌಕರರ ಸಂಧ್ಯಾ ಕಾಲದ ಬದುಕಿಗೆ ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ ಆದುದರಿಂದ,
ದಿನಾಂಕ :26.09.2024ರಂದು ರಾಷ್ಟ್ರದಾದ್ಯಂತ NMOPS ಸಂಘಟನೆಯು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ “No_NPS No_UPS Only OPS” ಎಂಬ ಶೀರ್ಷಿಕೆಯಡಿ OPSಅನ್ನು ಜಾರಿಗೊಳಿಸುವಂತೆ,
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.


ಆದುದರಿಂದ, ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು
ಹಿಂಪಡೆಯುವಂತೆ ಮತ್ತು ರಾಜ್ಯ ದಲ್ಲಿ NPS ಯೋಜನೆಯನ್ನು ಪರಾಮರ್ಶಿಸಲು ರಚಿಸಿರುವ ಸಮಿತಿಯನ್ನು ಸಂಘವು ತೀರ್ವವಾಗಿ ವಿರೋಧಿಸುತ್ತಾ, ಕಾಂಗ್ರೆಸ್ ಪಕ್ಷವು ಈಗಾಗಲೇ ನಮ್ಮ ಸಂಘಟನೆಗೆ ನೀಡಿರುವ ಭರವಸೆಯಂತೆ, NPS ಅನ್ನು ರದ್ದು ಗೊಳಸಿ, OPS ಅನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಜನಿಕಾಂತ್, ಸಹ ಕಾರ್ಯದರ್ಶಿ ಚಂದ್ಯನಾಯ್ಕ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಘವೇಂದ್ರ, ಕಾರ್ಯದರ್ಶಿ ಶಿವಶಂಕರ್, ಡಾ. ನಾಗರಾಜ ಪರಿಸರ, ಹಾಲೇಶಪ್ಪ ಇನ್ನಿತರರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *