ರೈಲ್ವೆ ಪ್ರಯಾಣಿಕರ ನಾಗರಿಕರ ಸಂಘದಿಂದ ರೈಲ್ವೆ ಸಚಿವ V ಸೋಮಣ್ಣ ರವರಿಗೆ ಮನವಿ ಸಲ್ಲಿಸಿದರು.
೧. ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಮಂಗಳೂರು, ಸುಬ್ರಮಣ್ಯ ಮಂಗಳೂರು. ಹೊಸ ರೈಲ್ವೆ ಇಂಟರ್ ಸಿಟಿ ಬಿಡಬೇಕು.(ಇದರಿಂದ ಕೇರಳ ಕೊಚ್ಚಿನ್ ಗುರುವಾಯುರು, ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುತ್ತದೆ). ಮತ್ತು ಶಿವಮೊಗ್ಗದಿಂದ ಮಂಗಳೂರು ಬಂದರು ನಗರಕ್ಕೆ ಸಂಪರ್ಕ ಸಿಗುತ್ತದೆ ಎಂದರು.
೨. ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ೫೦ ಬೆಡ್‌ನ ರೈಲ್ವೆ ಯಾತ್ರೆ ನಿವಾಸ ಮತ್ತು ಲಗೇಜ್ ಲಾಕರ್ ಮತ್ತು ಸ್ತಿçÃಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ವಿತ್ ಸಿ.ಸಿ. ಟಿ.ವಿ ಕ್ಯಾಮರ. ಹಾಗೂ ೧ ಮತ್ತು ೨ ಮತ್ತು ೩ನೇ ಫ್ಲಾಟ್ ಫಾರಂನಲ್ಲಿ ಮಹಿಳೆ ಫೀಡಿನ್ ಕ್ಯಾಬಿನ್ ಅಳವಡಿಸುವಂತೆ ಕೇಳಿಕೊಳ್ಳುತ್ತೇವೆ. ೨ ಮತ್ತು ೩ ನೇ ಪ್ಲಾಟ್ ಫಾರಂಗೆ ಅನುಗುಣವಾಗಿ ಈ ಶೌಚಾಲಯ ಕಟ್ಟಿಸಿಬೇಕಾಗುತ್ತದೆ. ಮತ್ತು ದಿನಕ್ಕೆ ೮,೦೦೦ ಜನರು ರೈಲ್ವೆ ಪ್ರಯಾಣಿಕರು ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ೨ ಮತ್ತು ೩ನೇ ಫ್ಲಾಟ್ ಫಾರಂಗೆ ಎಕ್ಸ್ಲೇಟರ್ ಅನ್ನು ಅಳವಡಿಸುವಂತೆ ವಿನಂತಿಸುತ್ತೇವೆ ಎಂದರು.
೩. ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣಗಳ ಮತ್ತು ಐತಿಹಾಸಿಕ ತಾಣಗಳ ಮಾಹಿತಿ ಕೇಂದ್ರವನ್ನು ತೆರೆಯಬೇಕು.ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಎಲ್ಲಾ ರೈಲ್ವೆ ಕೋಚ್‌ಗಳಲ್ಲಿ ಶಿವಮೊಗ್ಗ ಜಿಲ್ಲಾ ಐತಿಹಾಸಗಳ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ದ ಚಿತ್ರವನ್ನು ಭೋಗಿಗಳಲ್ಲಿ ಅಳವಡಿಸಬೇಕಾಗಿ ಹೇಳಿದರು.
೪. ಶಿವಮೊಗ್ಗದಿಂದ ಬೆಂಗಳೂರಿಗೆ ಗರೀಬಿರಥ ರೈಲನ್ನು ತಿಳಿಸಬೇಕೆಂದು ಮನವಿ ಮಾಡಿದರು.
೫. ಶಿವಮೊಗ್ಗದಿಂದ ಮುಂಬೈಗೆ ನೇರ ಸಂಪರ್ಕ ರೈಲನ್ನು ಓಡಿಸಬೇಕಾಗಿ ಶಿವಮೊಗ್ಗ-ಬೀರೂರು ಜಂಕ್ಷನ್, ಹುಬ್ಬಳ್ಳಿ ಮಾರ್ಗವಾಗಿ ಮುಂಬೈ ಸೇರುತ್ತದೆ.
೬. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಾಹನದ ನಿಲ್ದಾಣವನ್ನು ಸಮಪರ್ಕವಾಗಿ ಮಾಡಿಕೊಡಬೇಕು.ಮತ್ತು ರಾತ್ರಿಯ ವೇಳೆ ಲೈಟ್‌ನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಡಬೇಕಾಗಿ ವಿನಂತಿಸಿದರು.
೭. ಶಿವಮೊಗ್ಗದಿಂದ ಕಡಿಮೆ ದರದಲ್ಲಿ ಪ್ಯಾಜೆಂಜರ್ ರೈಲನ್ನು ದಿನದ ಅವಧಿಯಲ್ಲಿ ಶಿವಮೊಗ್ಗ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ, ಮಂತ್ರಾಲಯ, ರಾಯಚೂರುಗೆ ಬಿಡಬೇಕಾಗಿ ಹೇಳಿದರು.
೮. ಸೀನಿಯರ್ ಸಿಟಿಜನ್ ಕೋಟಾ ಮತ್ತು ಸೀನಿಯರ್ ಸಿಟಿಜನ್‌ಗೆ ೫೦% ರಿಯಾಯಿತಿ ದರದ ಟಿಕೇಟ್‌ನ್ನು ಮರು ಸ್ಥಾಪಿಸಲು ಕೋರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಧುರ ಹೋಟೆಲ್ ಮಾಲೀಕರದ ಗೋಪಿನಾಥ ಡಾ ದಿನೇಶ ಕೆ ರಂಗನಾಥ್ ಡಾ ಶಿಶಿರ ಜಗದೀಶ್ ಡಾ ಶಿವಕುಮಾರ್ ವೆಂಕಟೇಶ್ ಮಂಜುನಾಥ್ ನೂರ್ ಅಹಮದ್ ವಿನೋದ ಕೆ ಜೋಸೆಫ್ ಮುಂತಾದವರು ಉಪಸ್ಥಿತರಿದ್ದರು.