ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ನ ಸ್ವಚ್ಛ ಭಾರತ್ ಮಿಷನ್- ನಯಾ ಸಂಕಲ್ಪದ ಯೋಜನೆಯಲ್ಲಿ ಸ್ವಭಾವ್ ಸ್ವಚ್ಛತಾ, ಸಂಸ್ಕಾರ್ ಸ್ವಚ್ಛತೆ ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೊಬರ್ ೨ ರಂದು ಗಾಂಧಿ ಜಯಂತಿಯ ಪ್ರಯುಕ್ತ ಸೆಪ್ಟೆಂಬರ್ 17 ರಿಂದ 2ನೇ ಅಕ್ಟೋಬರ್ 2024 ವರೆಗೆ ಹಮ್ಮಿಕೊಳ್ಳಲಾಗಿದ್ದು, ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಪುರುದಾಳು ಗ್ರಾಮ ಪಂಚಾಯತಿ ಸ್ವಾಮಿ, ವಿವೇಕಾನಂದ ಯೂತ್ ಪೌಂಡ್ ಶನ್ (ರಿ )ಶಿವಮೊಗ್ಗ, ಇವರ ಸಹಯೋಗದೊಂದಿಗೆ ” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ಸಾಗರ ರಸ್ತೆಯ ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀ ಉಲ್ಲಾಸ್ ಕೆ.ಟಿ.ಕೆ ರವರು ಸ್ವಚ್ಛತಾ ಸಂಕಲ್ಪದ ಬಗ್ಗೆ ಸ್ವಚ್ಛತಾ ಅಭಿಯಾನದ ಕುರಿತು ಮಾಹಿತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಜಾಗೃತಿಗೊಳಿಸುವುದಕ್ಕೆ ನಾವು ನಿರಂತರವಾಗಿ ಕೈಜೋಡಿಸಿ ಕ್ರಮವನ್ನು ಕೈಗೊಳ್ಳುವ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು. ಶ್ರೀ ಶಾಂತಕುಮಾರ್ ರವರು ಕಾರ್ಯಕ್ರಮವನ್ನು ಕುರಿತು ಭಾರತ ಸರ್ಕಾರವು ಸ್ವಚ್ಛತ ಆಂದೋಲನವನ್ನು 2014 ರಂದು ಜಾರಿಗೊಳಿಸಲಾಯಿತು.
ಯುವ ಜನರು ಈ ಪರಿಕಲ್ಪನೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಸಬೇಕು ಎಂದು ತಿಳಿಸಿದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಪ್ರೇ ಮಾ ಶ್ರೀಧರ್ ಸೇಟ್ ,ಯೂತ್ ಪೌಂಡ್ ಷನ್ ನ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ,ಕಾರ್ಯದರ್ಶಿಯಾದ ರಾಜೇಶ್ ,ಸಹ ಕಾರ್ಯದರ್ಶಿಯಾದ ಸುನಿಲ್ ,ಸಂಸ್ಥೆಯ ಸದಸ್ಯರಗಳು,ಸ್ವಯಂ ಸೇವಕರುಗಳು ಆಗಮಿಸಿದ್ದು,ಹುಲಿ-ಸಿಂಹಧಾಮದ ಸುತ್ತಮುತ್ತಲಿನ್ ಜಾಗವನ್ನು ಸ್ವಚ್ಚಗೊಳಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.