ತ್ರಿಭುವನ್, 55 ವರ್ಷ, ಬೇದೂರು ಗ್ರಾಮ ಸಾಗರ ತಾಲ್ಲೂಕು ರವರು ತಮ್ಮ ಮನೆಯ ಪಕ್ಕದ ಶೆಡ್ ನಲ್ಲಿ ಇಟ್ಟಿದ್ದ ಮರ ಕತ್ತರಿಸುವ ಯಂತ್ರ, ತಾಮ್ರದ ಹಂಡೆಯನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0139/2024 ಕಲಂ 303(2) BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಪ್ರಕಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ
ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲ ಕೃಷ್ಣ ಟಿ ನಾಯಕ್ ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಮಹಾಬಲೇಶ್ವರ ನಾಯ್ಕ್ ಪೊಲೀಸ್ ನಿರೀಕ್ಷಕರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಶ್ರೀ ಸಿದ್ದರಾಮಪ್ಪ, ಪಿಎಸ್ಐ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳಾದ ಸಿ.ಹೆಚ್.ಸಿ – ಷೇಖ್ ಫೈರೋಜ್ ಅಹಮ್ಮದ್, ಸಿ.ಪಿ.ಸಿ – ನಂಧೀಶ್, ರವಿಕುಮಾರ್, ಪ್ರವೀಣ್ ಕುಮಾರ್, ವಾಹನ ಚಾಲಕರಾದ ಎ.ಹೆಚ್.ಸಿ ಗಿರೀಶ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಗುರುರಾಜ್, ಇಂದ್ರೇಶ್ ಮತ್ತು ವಿಜಯ್ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ 26-09-2024 ರಂದು ಪ್ರಕರಣದ ಆರೋಪಿತರಾದ 1) ನಾಗರಾಜ @ ಕರಡಿ, 24 ವರ್ಷ, ನೆಹರೂ ನಗರ ಸಾಗರ ಟೌನ್ ಮತ್ತು 2) ರಾಘವೇಂದ್ರ @ ರೊಡ್ಡಿ, 22 ವರ್ಷ, ಎಸ್. ಎನ್ ನಗರ ಸಾಗರ ಟೌನ್ ರವರುಗಳನ್ನು ದಸ್ತಗಿರಿ ಮಾಡಿ ಸದರಿಯವರಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೇಲ್ಕಂಡ ಪ್ರಕರಣ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ 02 ಅಡಿಕೆ ಕಳವು ಪ್ರಕರಣಗಳು ಸೇರಿ ಒಟ್ಟು 03 ಪ್ರಕರಣಗಳಿಗೆ ಸಂಬಂಧಿಸಿದ 1) ಅಂದಾಜು ಮೌಲ್ಯ 18,000/- ರೂಗಳ ಮರ ಕತ್ತರಿಸುವ ಯಂತ್ರ, 2) ಅಂದಾಜು ಮೌಲ್ಯ 1,05,000/- ರೂಗಳ ಚಾಲಿ ಅಡಿಕೆ, 3) ಅಂದಾಜು ಮೌಲ್ಯ 1,00,000/- ರೂಗಳ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ, 4) ಅಂದಾಜು ಮೌಲ್ಯ 10,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು 2,33,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.