ರಾಮನಗರ ಜಿಲ್ಲೆಯ ‘ಮೇಕೆದಾಟು’ವಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಕಟ್ಟಲಿರುವ ಅಣೆಕಟ್ಟು ಯೋಜನೆಯನ್ನು ಕೂಡಲೇ ಕಾಮಗಾರಿ ಆರಂಭಿಸಿ ಅನುಷ್ಠಾನಕ್ಕೆ ತರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆ ಸರಕಾರವನ್ನು ವಿನಯಪೂರ್ವಕವಾಗಿ ಆಗ್ರಹಪಡಿಸುತ್ತದೆ. ತಮಿಳುನಾಡು ಸರ್ಕಾರವು ಸುಖಾ ಸುಮ್ಮನೇ ಕ್ಯಾತೆ ತೆಗೆಯುತ್ತಿದ್ದು ಕಾವೇರಿ ವಿಚಾರದಲ್ಲೂ ಈ ಹಿಂದೆ ರಾಜಕೀಯ ಮೇಲಾಟ ನಡೆಸಿ ಭಾಷಾಭಿಮಾನಕ್ಕೂ ಧಕ್ಕೆ ಉಂಟು ಮಾಡಿತ್ತು. ಕಾವೇರಿ ಜಲವಿವಾದ ನ್ಯಾಯಮಂಡಳಿಯ ತೀರ್ಪಿನಂತೆ ತಮಿಳುನಾಡು ಕೇರಳ ಪುದುಚೇರಿಗೆ ಅವರ ಪಾಲಿನ ನೀರನ್ನು ಸರ್ಕಾರ ಬಿಡುತ್ತಿದ್ದು ಉಳಿದ ನೀರು ಬಂಗಾಳಕೊಲ್ಲಿಯ ಸಾಲ ಆಗುವುದನ್ನು ತಡೆಗಟ್ಟಲು ಮೇಕೆದಾಟು ಅಣೆಕಟ್ಟು ಯೋಜನೆ ನಿರ್ಮಾಣ ಕೈಗೊಂಡಿದ್ದು ಇದರಿಂದ ತಮಿಳ್ನಾಡಿಗೆ ನೀರಿನಲ್ಲಿ ಯಾವುದೇ ಕಡಿತ ಉಂಟಾಗುವುದಿಲ್ಲ ಆದರೆ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಬಾಹ್ಯ ಸ್ಪಂದನವಾಗಿದೆ ತಮಿಳುನಾಡು ಸರ್ಕಾರಕ್ಕೆ ಸೊಪ್ಪು ಹಾಕದೆ ಅಣೆಕಟ್ಟೆ ಯೋಜನೆ ಆರಂಭಿಸಲಿ ಎಂದು ವೇದಿಕೆಯು ಆಗ್ರಹ ಪಡಿಸುತ್ತದೆ. ಮೇಕೆದಾಟು ವಿಚಾರದಲ್ಲಿ ಅಲ್ಲಿನ ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೆ ರವರ ಕ್ಯಾತೆ ಉಪವಾಸ ಒಂದು ‘ರಾಜಕೀಯದ ಸೆಂಟ್ ‘ ಅಲ್ಲಿಯ ಜನರನ್ನು ಓಲೈಕೆ ಮಾಡಿ ರಾಜಕೀಯದ ಭವಿಷ್ಯ ಕಂಡುಕೊಳ್ಳುವ ಹುನ್ನಾರವೇ ಹೊರತು ಮತ್ತೇನಿಲ್ಲ. ಅಣ್ಣಾಮಲೈಯವರು ಕರ್ನಾಟಕದ ಅನ್ನ ತಿಂದು ಇಲ್ಲಿಯ ನೀರು ಕುಡಿದು ಇಲ್ಲಿಯೇ ಉದ್ಯೋಗ ಮಾಡಿ ಸಿಂಗಲ್ ಎಂದು ಹೆಸರು ಪಡೆದು ಮೇಕೆದಾಟು ಯೋಜನೆಯನ್ನು ವಿರೋಧಿಸಿ ಕನ್ನಡ ನಾಡಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದು ಕೂಡಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಭವಿಷ್ಯದ ಯೋಜನೆ ಕಲ್ಪಿಸಿಕೊಡಬೇಕು ಈ ಹಿಂದೆ ಇದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಕುಂಟು ನೆಪವೊಡ್ಡಿ ಮೇಕೆದಾಟು ಯೋಜನೆಯನ್ನು ಮುಂದೂಡುತ್ತಲೇ ಬಂದಿದ್ದು ಈಗ ಸರ್ಕಾರವು ಯಾವ ಮುಲಾಜಿಗೂ ಒಳಗಾಗದೆ ಯಾವ ದೊಣ್ಣೆನಾಯಕನ ಅಪ್ಪಣೆಗೆ ಕಾಯದೇ ಮೇಕೆದಾಟು ಯೋಜನೆಯನ್ನು ಕೂಡಲೇ ಅನುಷ್ಠಾನಕ್ಕೆ ತಂದು ಕಾಮಗಾರಿ ಆರಂಭಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವೇದಿಕೆಯು ಉಗ್ರ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾದಿತ್ತು ಎಂದು ಎಚ್ಚರಿಸುತ್ತಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153