ರಾಜ್ಯಾಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್ ಇವರ ಮಾರ್ಗದರ್ಶನದಿಂದ ಸಾಗರದಲ್ಲಿ ಸಹ್ಯಾದ್ರಿ ಪರ್ವತದ ಉದರದಲ್ಲಿ ಜನಿಸಿ ಬಂದ ಸರಿಯಾದ ಶಿಕ್ಷಣ ಮಲೆನಾಡಿನ ಹಿರಿಮೆಗೆ ಸಾಕ್ಷಿ ನಾಡ ರಕ್ಷಣೆಗೆ ಟೊಂಕಕಟ್ಟಿ ನಿಂತ ಸಲಗಾರ ಸಮಾಜವಾದಿ ದೀಕ್ಷೆ ಪಡೆದು ರಾಜಕೀಯ ಪ್ರವೇಶ ಮಾಡಿ ದೀನ- ದಲಿತ-ಹಿಂದುಳಿದ ಎಲ್ಲ ಸಮುದಾಯ ವರ್ಗಗಳ ನಾಯಕರಾಗಿ ಬೆಳೆದ ಲೋಹಿಯಾ- ಶಾಂತವೇರಿ ಗೋಪಾಲಗೌಡರು -ದೇವರಾಜ ಅರಸು ಕನಸುಗಳಲ್ಲಿ ಮುನ್ನಡೆದು. ನಿಷ್ಠೆ ಪ್ರಾಮಾಣಿಕತೆ ಹೋರಾಟ ಸ್ವಾಭಿಮಾನದ ಸಮುದ್ರವಾದವರು. ನೆಲ ಸಿಕ್ಕಲಿ ಕುಲದ ಬೀಜ ಬಿತ್ತಿ ಬೆಳೆಯದೆ ಸಮತೆ -ಸಂಸ್ಕೃತಿಯ ಶೃಂಗಾರವಾದವರು. ಆಕಾಶದ ಕಂಡಲ್ಲಿ ಅವಕಾಶ ಪಡೆಯದೇ ಗುಡಿ ಗೋಪುರದ ಘನತೆಯಾಗಿ ಬಾಳಿದ ಕರ್ನಾಟಕ ಕಂಡ ಧೀಮಂತ ರಾಜಕಾರಣಿ. ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್.ಬಂಗಾರಪ್ಪನವರ ಪ್ರಮುಖ ಯೋಜನೆಗಳಾದ ಆಶ್ರಯ, ಅಕ್ಷಯ, ಆರಾಧನಾ, ಶುಶ್ರೂಷಾ, ವಿಶ್ವ ರೈತರಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ಭಾಗ್ಯಜ್ಯೋತಿ, ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪನೆ ಕರ್ನಾಟಕ ಪೊಲೀಸ್ ಇಲಾಖೆಯ ಕ್ರಾಂತಿ ಕರ್ನಾಟಕ ರತ್ನ ಪ್ರಶಸ್ತಿಯ ರೂವಾರಿ, ಸಾಗುವಳಿದಾರರಿಗೆ ಜಮೀನು ಉಳುವವನೇ ಹೊಲದೊಡೆಯ, ಎಂಬ ಕಾನೂನಿನ ಮುಖಾಂತರ ಗೇಣಿದಾರರ ರಕ್ಷಣೆಗಾಗಿ ಕರ್ನಾಟಕದಾದ್ಯಂತ ಲಕ್ಷಾಂತರ ರೈತರಿಗೆ ಜಮೀನನ್ನು ಕೊಡಿಸುವಲ್ಲಿ ಯಶಸ್ವಿಯಾದ ನಾಯಕ, ಪ್ರಶಸ್ತಿ ಕೊಟ್ಟ ಗೌರವ ಕಾವೇರಿ ವಿವಾದ ಕನ್ನಡ ಹಂಪಿ ವಿಶ್ವವಿದ್ಯಾಲಯ ಸ್ಥಾಪನೆ ಕುವೆಂಪು ಬೇಂದ್ರೆ ಪ್ರತಿಷ್ಠಾನ ಸ್ಥಾಪನೆ, ಮುಂತಾದವುಗಳು ಇನ್ನೂ ಅನೇಕ ಜನಪ್ರಿಯ ಯೋಜನೆಗಳನ್ನು ಎಲ್ಲ ಜಾತಿ ವರ್ಗದ ಸಮುದಾಯಗಳಿಗೆ ಸೀಮಿತ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನಾಣ್ನುಡಿಯಂತೆ ಅಂಧಕಾರದಲ್ಲಿ ಮುಳುಗಿದ್ದ ಜನರಿಗೆ ಬೆಳಕಿನ ಜಗತ್ತನ್ನು ತೋರಿಸಲು ತಮ್ಮ ಜೀವನದುದ್ದಕ್ಕೂ ಹಗಲಿರುಳು ದುಡಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್ ಬಂಗಾರಪ್ಪನವರ ಹೆಸರನ್ನು ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಶ್ರೀನಾರಾಯಣಗುರು ವಿಚಾರ ವೇದಿಕೆ ( ರಿ) (SNGV) ಸಾಗರ ತಾಲ್ಲೂಕು ಘಟಕದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153