ಇನ್ನರ್‌ವ್ಹೀಲ್ ಸಂಸ್ಥೆಯು ಸ್ನೇಹ, ಪ್ರೀತಿ ಭಾಂದವ್ಯದ ಜತೆಯಲ್ಲಿ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದು ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚರ‍್ಮನ್ ಸುಧಾ ಪ್ರಸಾದ್ ಹೇಳಿದರು. ನಗರದ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ನಗರದ ಎಲ್ಲ ಇನ್ನರ್‌ವ್ಹೀಲ್ ಕಲ್ಬ್ಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ನೇಹಿತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸಂಸ್ಥೆಯಲ್ಲಿ ಸ್ನೇಹಭಾವದಿಂದ ಎಲ್ಲರೂ ಒಟ್ಟುಗೂಡಿ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಸ್ನೇಹದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು. ಮಹಿಳೆಯರು ಬಿಡುವಿನ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು. ಪರಸ್ಪರ ಪರಿಚಯದ ಜತೆಯಲ್ಲಿ ಕೌಶಲ್ಯಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ನೇಹಿತರು ಜೀವನದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಾರೆ. ನಮ್ಮಲ್ಲಿರುವ ಪ್ರತಿಭೆಯನ್ನು ಸ್ನೇಹಿತರು ಗುರುತಿಸಿ ಪ್ರೋತ್ಸಾಹಿಸುತ್ತಾರೆ ಎಂದರು.
ಸ್ನೇಹದಿದ ನಮ್ಮಲ್ಲಿರುವ ಮಾನಸಿಕ ಒತ್ತಡ ಕಡಿಮೆ ಆಗುವುದರ ಜತೆಯಲ್ಲಿ ನಮ್ಮಲ್ಲಿನ ನೋವು ನಲಿವುಗಳನ್ನು ಹಂಚಿಕೊಳ್ಳಬಹುದು. ನೋವುಗಳಿಗೆ ಪರಿಹಾರ ಕಂಡುಕೊಳ್ಳಲು ಭಾವನೆಗಳನ್ನು ಹಂಚಿಕೊಳ್ಳುವುದು ಸಹಾಯಕವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ಗಳಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಮಹಿಳೆಯರಿಗೆ ವಿಶೇಷ ಕ್ರೀಡಾಕೂಟ, ರಸಪ್ರಶ್ನೆ ಹಾಗೂ ಆಟೋಟಗಳನ್ನು ನಡೆಸಲಾಯಿತು. ಎಲ್ಲ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಸ್ನೇಹಿತ ಬ್ಯಾಂಡ್ ಕಟ್ಟಿಕೊಂಡು ಕೇಕ್ ಕತ್ತರಿಸಿ ಸಿಹಿ ತಿನಿಸಿ ಸಂಭ್ರಮಿಸಿದರು. ವಿವಿಧ ರಾಜ್ಯಗಳ ಉಡುಗೆಶೈಲಿಗಳಲ್ಲಿ ಸದಸ್ಯರು ಧರಿಸಿದ್ದರು. ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮಾಜಿ ಚರ‍್ಮನ್ ಭಾರತಿ ಚಂದ್ರಶೇಖರ್, ಎಸಿ ಮೆಂಬರ್ ವಾರಿಜಾ ಜಗದೀಶ್, ಶಬರಿ ಕಡಿದಾಳ್, ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ಸುಜಾತಾ ಮಂಜುನಾಥ್, ವಾಣಿ ಪ್ರವೀಣ್, ವಿಜಯ ರಾಯ್ಕರ್, ನಿರ್ಮಲ ಮಹೇಂದ್ರ, ವೀಣಾ ಹರ್ಷ, ರಾಜೇಶ್ವರಿ, ವೀಣಾ ಸುರೇಶ್, ಸುಧಾ ಪಾಂಡು, ಅಂಬಿಕಾ ಮೂರ್ತಿ ಹಾಗೂ ಎಲ್ಲ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಜರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153